ಮೊಹಾಲಿ(ಮಾ.11): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಪಂದ್ಯಕ್ಕೆ ಮೊಹಾಲಿ ಕ್ರೀಡಾಂಗಣ ಆತಿಥ್ಯವಹಿಸಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗಿರಿಸಿದರೂ ರನ್ ಮಳೆ ಸುರಿಸಿತ್ತು. ಆದರೆ ಈ ಪಂದ್ಯವೇ ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿನ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಇದನ್ನೂ ಓದಿ: ಮೊಹಾಲಿಯಲ್ಲಿ ಮ್ಯಾಚ್ ಟರ್ನ್ ಮಾಡಿದ ಟರ್ನರ್

1993ರಿಂದ ಇಲ್ಲೀವರೆಗೂ ಮೊಹಾಲಿ ಕ್ರೀಡಾಂಗಣ ಟೆಸ್ಟ್, ಏಕದಿನ, ಟಿ20 ಪಂದ್ಯ ಆಯೋಜಿಸಿದೆ. 13 ಟೆಸ್ಟ್, 18 ಏಕದಿನ ಹಾಗೂ ಐಪಿಎಲ್ ಸೇರಿದಂತೆ ದೇಸಿ ಕ್ರಿಕೆಟ್ ಪಂದ್ಯಕ್ಕೆ ಆತಿಥ್ಯ ನೀಡಿದೆ. 2011ರ ವಿಶ್ವಕಪ್ ಸೆಮಿಫೈನಲ್ ಹಾಗೂ 1996ರ ಸೆಮಿಫೈನಲ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆದಿತ್ತು. ಆದರೆ ಇದೀಗ ಈ ಮೈದಾನವನ್ನು ನವೀಕರಿಸಲು ಪಂಜಾಬ್ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. 

ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಹ್ವಾನ ತಿರಸ್ಕರಿಸಿದ ಬಿಸಿಸಿಐ!

12ನೇ ಆವೃತ್ತಿ ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಐಎಸ್ ಬಿಂದ್ರಾ ಅಂತಾರಾಷ್ಟ್ರೀಯ ಕ್ರೀಡಾಂಗಣ ನವೀಕರಣಗೊಳ್ಳಲಿದೆ. ಕ್ರೀಡಾಂಗಣದ ಆಸನ ವ್ಯವಸ್ಥೆಯನ್ನು 28,000 ದಿಂದ 38,000ಕ್ಕೆ ಏರಿಸಲಾಗುತ್ತಿದೆ. ಹಾಗೂ ಚಿನ್ನಸ್ವಾಮಿ  ಕ್ರೀಡಾಂಗಣದ ರೀತಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಪಂಜಾಬ್ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.

ಇದನ್ನೂ ಓದಿ: ಕಾಫಿ ವಿತ್ ಕರಣ್ ಶೋಗೆ ಹೋಗ್ತೀರಾ? ಅಭಿಮಾನಿ ಪ್ರಶ್ನೆಗೆ ಅಶ್ವಿನ್ ಉತ್ತರ!

ಕಳೆದ 2 ವರ್ಷದಿಂದ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ನವೀಕರಿಸಲು ಯೋಜನೆ ಹಾಕಿದೆ. ಆದರೆ ಲೋಧ ಸಮಿತಿ ಶಿಫಾರಸಿನಿಂದ ಬಿಸಿಸಿಐಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ರೀಡಾಂಗಣ ನವೀಕರಣ ಯೋಜನೆ ಅರ್ಧಕ್ಕೆ ಮೊಟಕುಗೊಂಡಿತ್ತು.