ಅರ್ಜೆಂಟೀನಾ ಮಣಿಸಿ ದಾಖಲೆ ಬರೆದ ಭಾರತ ಫುಟ್ಬಾಲ್ ತಂಡ

ಫುಟ್ಬಾಲ್‌ನಲ್ಲಿ ಅರ್ಜೆಂಟೀನಾ ಬಲಿಷ್ಠ ತಂಡ.  ಹಿರಿಯರ ತಂಡವಾಗಿರಲಿ, ಕಿರಿಯರ ತಂಡವಾಗಿರಲಿ ಅರ್ಜೆಂಟೀನಾವನ್ನ ಸೋಲಿಸೋದು ಅಷ್ಟು ಸುಲಭವಲ್ಲ. ಆದರೆ ಅಂಡರ್-20 ಕೊಟಿಫ್ ಕಪ್ ಟೂರ್ನಿಯಲ್ಲಿ 6 ಬಾರಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವನ್ನ ಸೋಲಿಸಿ ದಾಖಲೆ ಬರೆದಿದೆ.

India under 20 football team create history beating argentia

ವೇಲೆನ್ಸಿಯಾ (ಸ್ಪೇನ್)ಆ.07): ಭಾರತ ಅಂಡರ್-20 ಫುಟ್ಬಾಲ್ ತಂಡ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಗೆದ್ದು ಫುಟ್ಬಾಲ್ ಜಗತ್ತನ್ನು ಬೆರಗಾಗಿಸಿದೆ. ಇಲ್ಲಿ ನಡೆಯುತ್ತಿರುವ ಕೊಟಿಫ್ ಕಪ್ ಟೂರ್ನಿಯಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 2-1 ಗೋಲುಗಳ ಗೆಲುವು ಸಾಧಿಸಿತು. 6 ಬಾರಿ ಅಂಡರ್-20 ವಿಶ್ವ ಚಾಂಪಿಯನ್ ಅರ್ಜೆಂಟೀನಾವನ್ನು ಸೋಲಿಸಿದ್ದು, ಭಾರತೀಯ ಫುಟ್ಬಾಲ್‌ನಲ್ಲಿ ಮಹತ್ವದ ಮೈಲಿಗಲ್ಲು ಎನಿಸಿದೆ. 

ಭಾರತ ಪರ ದೀಪಕ್ ತಂಗ್ರಿ (4ನೇ ನಿ.) ಹಾಗೂ ಫ್ರೀ ಕಿಕ್ ಮೂಲಕ ಅನ್ವರ್ ಅಲಿ (68ನೇ ನಿ.) ಅಮೋಘ ಗೋಲು ಗಳಿಸಿದರು. ತಂಡದ ಈ ಸಾಧನೆಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಸೇರಿ ಅನೇಕ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.  ಈ ಪಂದ್ಯಕ್ಕೂ ಮುನ್ನ ಭಾರತ 0-2 ಗೋಲುಗಳಲ್ಲಿ ಮರ್ಸಿಯಾ, 0-3 ಗೋಲುಗಳಲ್ಲಿ ಮೌರಿಟಿಯಾನ ವಿರುದ್ಧ ಸೋಲು ಅನುಭವಿಸಿತ್ತು. 

 

 

ವೆನೆಜುವೆಲಾ ವಿರುದ್ಧ ಪಂದ್ಯ ಗೋಲು ರಹಿತ ಡ್ರಾಗೊಂಡಿತ್ತು. ಈ ಗೆಲುವು ತಂಡದ ಆತ್ಮವಿಶ್ವಾಸ ವೃದ್ಧಿಸಿದೆ. ‘ಈ ಗೆಲುವು ಫುಟ್ಬಾಲ್ ಜಗತ್ತಿನಲ್ಲಿ ಭಾರತದ ಗೌರವವನ್ನು ಹೆಚ್ಚಿಸಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶ್ವ ಶ್ರೇಷ್ಠ ತಂಡಗಳ ವಿರುದ್ಧ ಆಡುವ ಅವಕಾಶ ದೊರೆಯಲಿದೆ’ ಎಂದು
ಭಾರತ ತಂಡದ ಕೋಚ್ ಫ್ಲಾಯ್ಡ್ ಪಿಂಟೋ ಹೇಳಿದ್ದಾರೆ. 

Latest Videos
Follow Us:
Download App:
  • android
  • ios