ಅಂಡರ್-19 ವಿಶ್ವಕಪ್: ಅಜೇಯವಾಗಿ ಕ್ವಾರ್ಟರ್'ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ

India Under 19 beat Zimbabwe Under 19 by 10 wickets
Highlights

'ಬಿ' ಗುಂಪಿನ ಪಂದ್ಯದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಪೃಥ್ವಿ ಶಾ ಪಡೆ ಜಿಂಬಾಬ್ವೆ ತಂಡವನ್ನು ಅನಾಯಾಸವಾಗಿ ಮಣಿಸುವ ಮೂಲಕ ಕ್ವಾರ್ಟರ್'ಫೈನಲ್'ಗೆ ಅಗ್ರಸ್ಥಾನಿಯಾಗಿ ಲಗ್ಗೆಯಿಟ್ಟಿದ್ದು, ಇದೀಗ ಎಂಟರಘಟ್ಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ನ್ಯೂಜಿಲೆಂಡ್(ಜ.19): ಶುಭ್'ಮನ್ ಗಿಲ್(90) ಹಾಗೂ ಹಾರ್ವಿಕ್ ದೇಸಾಯಿ(56) ಅಜೇಯ ಅರ್ಧಶತಕಗಳ ನೆರವಿನಿಂದ ಜಿಂಬಾಬ್ವೆ ವಿರುದ್ಧ ಕಿರಿಯರ ಟೀಂ ಇಂಡಿಯಾ 10 ವಿಕೆಟ್ ಭರ್ಜರಿ ಜಯ ಸಾಧಿಸುವುದರೊಂದಿಗೆ ಅಜೇಯವಾಗಿ ಕ್ವಾರ್ಟರ್ ಫೈನಲ್'ಗೆ ಲಗ್ಗೆಯಿಟ್ಟಿದೆ.

'ಬಿ' ಗುಂಪಿನ ಪಂದ್ಯದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಪೃಥ್ವಿ ಶಾ ಪಡೆ ಜಿಂಬಾಬ್ವೆ ತಂಡವನ್ನು ಅನಾಯಾಸವಾಗಿ ಮಣಿಸುವ ಮೂಲಕ ಕ್ವಾರ್ಟರ್'ಫೈನಲ್'ಗೆ ಅಗ್ರಸ್ಥಾನಿಯಾಗಿ ಲಗ್ಗೆಯಿಟ್ಟಿದ್ದು, ಇದೀಗ ಎಂಟರಘಟ್ಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ತಂಡಕ್ಕೆ ಅನೂಕೂಲ್ ರಾಯ್ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದರು. ಜಿಂಬಾಬ್ವೆ ತಂಡದ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಬ್ಯಾಟಿಂಗ್ ಬೆನ್ನುಲಬನ್ನೇ ಮುರಿದರು. ಆರ್ಶ್'ದೀಪ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ತಂಡವನ್ನು ಕೇವಲ 154 ರನ್'ಗಳಿಗೆ ಕಟ್ಟಿಹಾಕಿತು.

ಇನ್ನು ಸುಲಭ ಗುರಿ ಬೆನ್ನತ್ತಿದ ಭಾರತ ವಿಕೆಟ್ ನಷ್ಟವಿಲ್ಲದೇ ಗೆಲುವಿನ ನಗೆ ಬೀರಿತು.

ಸಂಕ್ಷಿಪ್ತ ಸ್ಕೋರ್:

ಜಿಂಬಾಬ್ವೆ: 154/10

ಮಿಲ್ಟನ್ ಶುಂಬಾ: 36

ಅನುಕೂಲ್ ರಾಯ್: 20/4

ಭಾರತ: 155/0

ಶುಭ್'ಮನ್ ಗಿಲ್: 90

ಹಾರ್ವಿಕ್ ದೇಸಾಯಿ: 56

ಫಲಿತಾಂಶ: ಭಾರತಕ್ಕೆ 10 ವಿಕೆಟ್'ಗಳ ಜಯ

loader