Asianet Suvarna News Asianet Suvarna News

ಏಷ್ಯಾಕಪ್ ಸೈಕ್ಲಿಂಗ್: 25 ಪದಕ ಗೆದ್ದ ಭಾರತ

ಟ್ರ್ಯಾಕ್ ಏಷ್ಯಾಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕ್ರೀಡಾಪಟುಗಳು ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ. ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವುದರೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  

India top medal tally in Track Asia Cup cycling
Author
New Delhi, First Published Sep 12, 2019, 3:41 PM IST
  • Facebook
  • Twitter
  • Whatsapp

ನವದೆಹಲಿ(ಸೆ.12): ಬುಧವಾರ ಇಲ್ಲಿ ಮುಕ್ತಾಯವಾದ ಟ್ರ್ಯಾಕ್ ಏಷ್ಯಾಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೈಕ್ಲಿಸ್ಟ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. 

ಏಷ್ಯಾ ಕಪ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌: ರಾಜ್ಯದ ವೆಂಕಪ್ಪಗೆ ಬೆಳ್ಳಿ

3ನೇ ಹಾಗೂ ಕೊನೆಯ ದಿನವಾದ ಬುಧವಾರ ಭಾರತದ ಸೈಕ್ಲಿಸ್ಟ್‌ಗಳು 2 ಚಿನ್ನ, 1 ಕಂಚಿನ ಪದಕ ಜಯಿಸಿದ್ದಾರೆ. ಒಟ್ಟಾರೆ ಭಾರತ 10 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನೊಂದಿಗೆ 25 ಪದಕ ಗೆದ್ದಿದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. 

ಏಷ್ಯಾ ಸೈಕ್ಲಿಂಗ್‌: ಭಾರ​ತ​ದ ರೋನಾಲ್ಟೋ ಏಷ್ಯಾ ದಾಖಲೆ

ಕಿರಿಯ ಪುರುಷರ ಕಿರೆನ್ ಸ್ಪರ್ಧೆಯಲ್ಲಿ ರೋನಾಲ್ಡೊ ಲೈಟೊನ್ಜಾಮ್, ಚಿನ್ನ ಗೆದ್ದರು. ಇದಕ್ಕೂ ಮುನ್ನ 1 ಕಿ.ಮೀ. ಟೈಮ್ ಟ್ರಯಲ್ ಹಾಗೂ ಸ್ಪ್ರಿಂಟ್ ಸ್ಪರ್ಧೆಯಲ್ಲಿ ರೋನಾಲ್ಡೊ ಚಿನ್ನಕ್ಕೆ ಮುತ್ತಿಟ್ಟರು. 2ನೇ ದಿನದ ಸ್ಪರ್ಧೆಯಲ್ಲಿ ರೋನಾಲ್ಡೊ ದಾಖಲೆ ನಿರ್ಮಿಸಿದ್ದರು. ಒಟ್ಟಾರೆ ರೋನಾಲ್ಡೊ 4 ಚಿನ್ನ ಗೆದ್ದರು

Follow Us:
Download App:
  • android
  • ios