ಚೀನಾ ವಿರುದ್ಧ ಫ್ರೆಂಡ್ಲಿ ಮ್ಯಾಚ್ ಆಡಲಿದೆ ಟೀಂ ಇಂಡಿಯಾ
ಭಾರತ ಫುಟ್ಬಾಲ್ ಫುಟ್ಬಾಲ್ ಫೆಡರೇಶನ್ ಐತಿಹಾಸಿಕ ಪಂದ್ಯ ಆಯೋಜಿಸಲು ಸಿದ್ಧತೆ ನಡೆಸಿದೆ. ಭಾರತ ಹಾಗೂ ಚೀನಾ ನಡುವಿನ ಫ್ರೆಂಡ್ಲಿ ಪಂದ್ಯ ಯಾವಾಗ ನಡೆಯಲಿದೆ. ಇಲ್ಲಿದೆ ಸಂಪೂರ್ಣ ವಿವರ.
ದೆಹಲಿ(ಜು.21): ಸುನಿಲ್ ಚೆಟ್ರಿ ನಾಯಕತ್ವದ ಭಾರತೀಯ ಫುಟ್ಬಾಲ್ ತಂಡ, ಚೀನಾ ವಿರುದ್ಧ ಐತಿಹಾಸಿಕ ಫ್ರೆಂಡ್ಲಿ ಪಂದ್ಯ ಆಡಲು ಸಜ್ಜಾಗಿದೆ. ಅಕ್ಟೋಬರ್ 13 ರಂದು ಫ್ರೆಂಡ್ಲಿ ಮ್ಯಾಚ್ ಆಯೋಜಿಸಲು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ನಿರ್ಧರಿಸಿದೆ.
ಭಾರತ ಹಾಗೂ ಚೀನಾ ಫುಟ್ಬಾಲ್ ತಂಡಕ್ಕೆ ಇದು ಅತ್ಯುತ್ತಮ ಅವಕಾಶ. ನೆರೆ ರಾಷ್ಟ್ರಗಳ ಫುಟ್ಬಾಲ್ ಪಂದ್ಯ ಉಭಯ ದೇಶಗಳ ಭಾಂದವ್ಯವನ್ನೂ ವೃದ್ಧಿಸಲಿದೆ ಎಂದು ಎಐಎಫ್ಎಫ್ ಮುಖ್ಯ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.
ಭಾರತ ಹಾಗೂ ಚೀನಾ ಫುಟ್ಬಾಲ್ ಮೈದಾನದಲ್ಲಿ 17 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 12 ಬಾರಿ ಚೀನಾ ಗೆಲುವು ಸಾಧಿಸಿದೆ. ಆದರೆ ಸದ್ಯ ಟೀಂ ಇಂಡಿಯಾ ಫುಟ್ಬಾಲ್ ತಂಡ ಬದಲಾಗಿದೆ. ಬಲಿಷ್ಠ ತಂಡವಾಗಿ ರೂಪುಗೊಂಡಿರುವ ಭಾರತ ಐತಿಹಾಸಿಕ ಪಂದ್ಯದಲ್ಲಿ ಚೀನಾ ತಂಡಕ್ಕೆ ತಿರುಗೇಟು ನೀಡಬಲ್ಲ ಶಕ್ತಿ ಹೊಂದಿದೆ.
ಚೀನಾ ವಿರುದ್ಧದ ಐತಿಹಾಸಿಕ ಪಂದ್ಯ, ಎಷ್ಯಕಪ್ ಟೂರ್ನಿಗೆ ನೆರವಾಗಲಿದೆ. ಚೀನಾ ಬಲಿಷ್ಠ ತಂಡ. ಹೀಗಾಗಿ ನಾವು ಸಮರ್ಥವಾಗಿ ತಂಡವನ್ನ ಎದುರಿಸಲಿದೆ ಎಂದು ಭಾರತ ಫುಟ್ಬಾಲ್ ತಂಡದ ಕೋಚ್ ಸ್ಟೀಫನ್ ಹೇಳಿದ್ದಾರೆ.