ಮೂರು ಏಕದಿನ ಪಂದ್ಯ ಸರಣಿಯನ್ನು 1-2ರಿಂದ ಕೈಚೆಲ್ಲಿದ ಇಂಗ್ಲೆಂಡ್ ಚುಟುಕು ಸರಣಿಯನ್ನಾದರೂ ತವರಿಗೆ ಹೊತ್ತೊಯ್ಯಬೇಕೆಂಬ ಸಂಕಲ್ಪ ತೊಟ್ಟಿದೆ.
ನಾಗ್ಪುರ(ಜ.28): ಸೀಮಿತ ಓವರ್'ಗಳ ಟೀಂ ಇಂಡಿಯಾ ನಾಯಕತ್ವ ಹೊತ್ತು ಮಿಶ್ರ ಫಲ ಅನುಭವಿಸಿರುವ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಪ್ರವಾಸಿ ಇಂಗ್ಲೆಂಡ್ ತಂಡ ಸತ್ವಪರೀಕ್ಷೆ ಒಡ್ಡಿದ್ದು, ಭಾನುವಾರ ನಡೆಯಲಿರುವ ಎರಡನೇ ಚುಟುಕು ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿಸಿದೆ.
ಮೂರು ಚುಟುಕು ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿ 5 ರನ್ ರೋಚಕ ಗೆಲುವು ಸಾಧಿಸಿದ ಇಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ಪ್ರಸಕ್ತ 1-0 ಮುನ್ನಡೆ ಸಾಧಿಸಿದ್ದು, ಸರಣಿಯನ್ನು ಜೀವಂತವಾಗಿಡಲು ಇಲ್ಲಿನ ಜಮ್ತಾ ಮೈದಾನದಲ್ಲಿನ ಪಂದ್ಯವನ್ನು ಜಯಿಸಲೇಬೇಕಿದೆ. ಆದರೆ, ಐದು ಟೆಸ್ಟ್ ಪಂದ್ಯ ಸರಣಿಯನ್ನು 0-4ರಿಂದ ಸೋತು ಆ ಬಳಿಕ ಮೂರು ಏಕದಿನ ಪಂದ್ಯ ಸರಣಿಯನ್ನು 1-2ರಿಂದ ಕೈಚೆಲ್ಲಿದ ಇಂಗ್ಲೆಂಡ್ ಚುಟುಕು ಸರಣಿಯನ್ನಾದರೂ ತವರಿಗೆ ಹೊತ್ತೊಯ್ಯಬೇಕೆಂಬ ಸಂಕಲ್ಪ ತೊಟ್ಟಿದೆ.
ಸಂಭವನೀಯರ ಪಟ್ಟಿ
ಭಾರತ
ಕೆ.ಎಲ್. ರಾಹುಲ್, ಮನ್‌ದೀಪ್ ಸಿಂಗ್/ರಿಷಭ್ ಪಂತ್, ವಿರಾಟ್ ಕೊಹ್ಲಿ (ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಎಂ.ಎಸ್. ಧೋನಿ (ವಿಕೆಟ್'ಕೀಪರ್), ಹಾರ್ದಿಕ್ ಪಾಂಡ್ಯ, ಅಮಿತ್ ಮಿಶ್ರಾ / ಯಜುವೇಂದ್ರ ಚಾಹಲ್, ಪರ್ವೇಜ್ ರಸೂಲ್ / ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಆಶೀಶ್ ನೆಹ್ರಾ.
ಇಂಗ್ಲೆಂಡ್
ಜೇಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್, ಜೋ ರೂಟ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಇಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಕ್ರಿಸ್ ಜೋರ್ಡಾನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್/ಜೇಕ್ ಬಾಲ್ ಮತ್ತು ಟಿಮಲ್ ಮಿಲ್ಸ್.
ಪಂದ್ಯ ಆರಂಭ: ಸಂಜೆ 7.00
ನೇರ ಪ್ರಸಾರ: ಸ್ಟಾರ್'ಸ್ಪೋರ್ಟ್ಸ್
