ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಸಾಕಷ್ಟು ಹೋರಾಟ ನಡೆಸುತ್ತಿರುವ ಸುರೇಶ್ ರೈನಾ ಬ್ಲೂ ತಂಡವನ್ನು ಮುನ್ನಡೆಸುತ್ತಿದ್ದು, ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಕಾನ್ಪುರ(ಸೆ.13): ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಪಂದ್ಯವು ಇಂದು ಆರಂಭವಾಗಿದ್ದು ಟಾಸ್ ಗೆದ್ದ ಇಂಡಿಯಾ ರೆಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಗ್ರೀನ್ ಪಾರ್ಕ್'ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ತಂಡಗಳು ಸೆಣಸಾಟ ನಡೆಸಲಿವೆ. ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಸಾಕಷ್ಟು ಹೋರಾಟ ನಡೆಸುತ್ತಿರುವ ಸುರೇಶ್ ರೈನಾ ಬ್ಲೂ ತಂಡವನ್ನು ಮುನ್ನಡೆಸುತ್ತಿದ್ದು, ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಈಗಾಗಲೇ ಇಂಡಿಯಾ ಗ್ರೀನ್ ವಿರುದ್ಧ ಮೊದಲ ಪಂದ್ಯ ಜಯಿಸಿರುವ ಇಂಡಿಯಾ ರೆಡ್, ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಗಟ್ಟಿಗಳಿಸಿಕೊಳ್ಳುವ ಹವಣಿಕೆಯಲ್ಲಿದೆ. ಇದಕ್ಕಾಗಿ ಎರಡೂ ತಂಡಗಳ ಆಟಗಾರರು ಕಠಿಣ ಅಭ್ಯಾಸ ನಡೆಸಿದಾರೆ.

ರೆಡ್ ತಂಡದಲ್ಲಿ ಕರ್ನಾಟಕದ ಕೆ.ಗೌತಮ್ ಆಡುತ್ತಿದು, ಗಮನಸೆಳೆಯುವ ಉತ್ಸಾಹದಲ್ಲಿದ್ದಾರೆ. ಬ್ಲೂ ತಂಡದ ನೇತೃತ್ವವನ್ನು ಸುರೇಶ್ ರೈನಾ ವಹಿಸಿದ್ದರೆ, ರೆಡ್ ತಂಡವನ್ನು ದಿನೇಶ್ ಕಾರ್ತಿಕ್ ಮುನ್ನಡೆಸಲಿದ್ದಾರೆ.