ಇಂಡಿಯಾ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೀನಾದ ಹುವಾಂಗ್‌ ಯುಕ್ಸಿಯಾಂಗ್‌ ವಿರುದ್ಧ 14-21, 21-16, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ಶ್ರೀಕಾಂತ್‌ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.

ನವದೆಹಲಿ(ಮಾ.31): 17 ತಿಂಗಳುಗಳ ಬಳಿಕ ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಪ್ರಮುಖ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಫೈನಲ್‌ ಪ್ರವೇಶಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೀನಾದ ಹುವಾಂಗ್‌ ಯುಕ್ಸಿಯಾಂಗ್‌ ವಿರುದ್ಧ 14-21, 21-16, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ಶ್ರೀಕಾಂತ್‌ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಪಾರುಪಳ್ಳಿ ಕಶ್ಯಪ್‌, ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆಲ್ಸನ್‌ ವಿರುದ್ಧ 11-21, 17-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಶ್ರೀಕಾಂತ್‌ ಹಾಗೂ ಅಕ್ಸೆಲ್ಸನ್‌ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ಪಿ.ವಿ.ಸಿಂಧು, ಚೀನಾದ ಹೇ ಬಿಂಗ್‌ಜಿಯೋ ವಿರುದ್ಧ 21-23, 18-21 ನೇರ ಗೇಮ್‌ಗಳಲ್ಲಿ ಸೋಲುಂಡು ನಿರಾಸೆ ಅನುಭವಿಸಿದರು. ಈ ವರ್ಷ ಮೊದಲ ಪ್ರಶಸ್ತಿ ಗೆಲ್ಲುವ ಭಾರತೀಯ ಆಟಗಾರ್ತಿಯ ಕನಸು ಭಗ್ನಗೊಂಡಿತು. ಇದೇ ವೇಳೆ ಪುರುಷರ ಡಬಲ್ಸ್‌ ಸೆಮೀಸ್‌ನಲ್ಲಿ ಭಾರತದ ಮನು ಅತ್ರಿ ಹಾಗೂ ಸುಮಿತ್‌ ರೆಡ್ಡಿ 12-21, 17-21 ಗೇಮ್‌ಗಳಲ್ಲಿ ಸೋಲುಂಡರು.