ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ 0-3 ಗೋಲುಗಳ ಸೋಲು ಕಂಡಿದ್ದ ಭಾರತ, ಕೊಲಂಬಿಯಾ ವಿರುದ್ಧ 1-2 ಗೋಲುಗಳಿಂದ ಪರಾಭವಗೊಂಡು ನಿರಾಸೆ ಅನುಭವಿಸಿತ್ತು.

ನವದೆಹಲಿ(ಅ.12): ಫಿಫಾ ಅಂಡರ್ 17ರ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ, ಘಾನಾ ವಿರುದ್ಧದ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 0-4 ಗೋಲುಗಳಿಂದ ಘಾನಾ ಎದುರು ಸೋಲು ಕಂಡಿತು. ಇದೊರಂದಿಗೆ ಭಾರತ ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲೂ ಪರಾಭವ ಹೊಂದಿದೆ. ಪಂದ್ಯದಲ್ಲಿ ಘಾನಾ ತಂಡದ ನಾಯಕ ಎರಿಕ್ ಅಯೆಹ್ 2, ಡಾನ್ಸೊ ಮತ್ತು ಟೊಕು ತಲಾ 1 ಗೋಲುಗಳಿಸಿ ಭಾರತದ ಜಯದ ಆಸೆಗೆ ತಣ್ಣೀರು ಎರಚಿದರು.

ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ 0-3 ಗೋಲುಗಳ ಸೋಲು ಕಂಡಿದ್ದ ಭಾರತ, ಕೊಲಂಬಿಯಾ ವಿರುದ್ಧ 1-2 ಗೋಲುಗಳಿಂದ ಪರಾಭವಗೊಂಡು ನಿರಾಸೆ ಅನುಭವಿಸಿತ್ತು.