ಎರಡನೇ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಪರ್ವೇಜ್ ರಸೂಲ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.
ನಾಗಪುರ್(ಜ. 29): ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಶಾಕ್ ಅನುಭವಿಸಿದ ಟೀಮ್ ಇಂಡಿಯಾ ಎರಡನೇ ಪಂದ್ಯಕ್ಕೆ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಪರ್ವೇಜ್ ರಸೂಲ್ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಆಶೀಶ್ ನೆಹ್ರಾ ಅಥವಾ ಜಸ್'ಪ್ರೀತ್ ಬುಮ್ರಾ ಅವರಿಬ್ಬರಲ್ಲೊಬರಿಗೆ ಕೊಕ್ ಕೊಡಬಹುದು. ರಾಹುಲ್ ಸ್ಥಾನಕ್ಕೆ ರಿಶಬ್ ಪಂತ್ ಅಥವಾ ಅಜಿಂಕ್ಯ ರಹಾನೆಗೆ ಚಾನ್ಸ್ ಕೊಡಬಹುದು. ಪರ್ವೆಜ್ ರಸೂಲ್ ಜಾಗಕ್ಕೆ ಅಮಿತ್ ಮಿಶ್ರಾ ಅವರನ್ನು ಆಡಿಸಬಹುದು. ಜೊತೆಗೆ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ನೀಡಬಹುದೆನ್ನಲಾಗಿದೆ. ಮನೀಶ್ ಪಾಂಡೆಗೆ ಮತ್ತೊಂದು ಅವಕಾಶ ಸಿಗಬಹುದು.
ಇಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.
