ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿ ಗೆದ್ದ ಚಿರಾಗ್ ಶೆಟ್ಟಿ-ಸಾತ್ವಿಕ್‌ ರಂಕಿರೆಡ್ಡಿ ಜೋಡಿಫೈನಲ್‌ನಲ್ಲಿ ಚೆನೈಸ್ ತೈಪೆ ಜೋಡಿಯ ಎದುರು ಸುಲಭ ಗೆಲುವು ದಾಖಲಿಸಿದ ಭಾರತಮೊದಲ ಬಾರಿಗೆ ಸೂಪರ್ 750 ಪ್ರಶಸ್ತಿ ಗೆದ್ದ ಚಿರಾಗ್-ಸಾತ್ವಿಕ್ ಜೋಡಿ

ಪ್ಯಾರಿಸ್(ಅ.31): ಭಾರತದ ತಾರಾ ಡಬಲ್ಸ್‌ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಚೈನೀಸ್ ತೈಪೆಯ ಲು ಚಿಂಗ್ ಯೋ ಮತ್ತು ಯಂಗ್ ಪೊ ಹಾನ್ ವಿರುದ್ದ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಫ್ರೆಂಚ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವದ 8ನೇ ಶ್ರೇಯಾಂಕಿತ ಭಾರತದ ಜೋಡಿಯಾದ ಸಾತ್ವಿಕ್ ಹಾಗೂ ಚಿರಾಗ್ ಜೋಡಿಯು, 25ನೇ ಶ್ರೇಯಾಂಕಿತ ಲು ಹಾಗೂ ಯಂಗ್ ಜೋಡಿ ವಿರುದ್ದ 21-13, 21-19 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೇವಲ 48 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಭಾರತದ ಜೋಡಿ ಯಶಸ್ವಿಯಾಗಿದೆ.

Scroll to load tweet…

2019ನೇ ಆವೃತ್ತಿಯ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಕೊನೆಗೂ ಫ್ರೆಂಚ್ ಓಪನ್ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಜೋಡಿ ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ ಓಪನ್ ಸೂಪರ್ 500, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಥಾಮಸ್‌ ಕಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು.

ಭಾರತದ ಈ ಜೋಡಿ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್‌ ವಿಶ್ವ ಕಿರೀಟ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಸಾತ್ವಿಕ್‌-ಚಿರಾಗ್ ಜೋಡಿಯು 2019ರಲ್ಲಿ ಥಾಯ್ಲೆಂಡ್ ಓಪನ್ ಹಾಗೂ 2022ರಲ್ಲಿ ಇಂಡಿಯನ್ ಓಪನ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೂಪರ್ 750 ಟೂರ್ನಮೆಂಟ್ ಗೆದ್ದ ಭಾರತದ ಮೊದಲ ಜೋಡಿ ಎನ್ನುವ ಹಿರಿಮೆಗೂ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಪಾತ್ರವಾಗಿದೆ.

ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಶಂಕರ್‌

ಸ್ಯಾಂಟ್ಯಾಂಡರ್‌(ಸ್ಪೇನ್‌): ಭಾರತದ ಶಂಕರ್‌ ಮುತ್ತುಸ್ವಾಮಿ ವಿಶ್ವ ಕಿರಿಯರ (ಅಂಡರ್‌-19) ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ವಿಶ್ವ ಕಿರಿಯರ ರಾರ‍ಯಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಶಂಕರ್‌, ತಮಗಿಂತ ಬಹಳ ಕೆಳಗಿರುವ (ಕಿರಿಯರ ವಿಶ್ವ ರಾರ‍ಯಂಕಿಂಗ್‌ 370) ಚೈನೀಸ್‌ ತೈಪೆಯ ಕುವೊ ಕುವಾನ್‌ ಲಿನ್‌ ವಿರುದ್ಧ 14-21, 20-22 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು.

ಕೇವಲ ಒಂದು ಗೇಮ್‌ ಬಿಟ್ಟುಕೊಟ್ಟು ಫೈನಲ್‌ ಪ್ರವೇಶಿಸಿದ್ದ ಶಂಕರ್‌, ಚಾಂಪಿಯನ್‌ ಪಟ್ಟಕ್ಕೇರುವ ನೆಚ್ಚಿನ ಶಟ್ಲರ್‌ ಎನಿಸಿದ್ದರು. ಆದರೆ ಫೈನಲ್‌ನಲ್ಲಿ ಎದುರಾಳಿಯ ತೀಕ್ಷ್ಣವಾದ ಹೊಡೆತಗಳ ಎದುರು ಭಾರತೀಯ ಆಟಗಾರ ಮಂಕಾದರು. ಸುಲಭವಾಗಿ ಮೊದಲ ಗೇಮ್‌ ಬಿಟ್ಟುಕೊಟ್ಟಚೆನ್ನೈನ ಶಟ್ಲರ್‌ 2ನೇ ಗೇಮ್‌ನಲ್ಲಿ 6 ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿಕೊಂಡ ಹೊರತಾಗಿಯೂ ಸೋಲು ಕಂಡರು.

ಜೋಹರ್‌ ಹಾಕಿ ಕಪ್‌ ಫೈನಲ್‌: ಆಸೀಸ್‌ ಮಣಿಸಿ ಭಾರತ ಚಾಂಪಿಯನ್

ಬೆಳ್ಳಿ ಗೆದ್ದ ಭಾರತದ 2ನೇ ಪುರುಷ ಶಟ್ಲರ್‌

ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ 2ನೇ ಪುರುಷ ಶಟ್ಲರ್‌ ಎನ್ನುವ ಹಿರಿಮೆಗೆ ಶಂಕರ್‌ ಪಾತ್ರರಾದರು. 2015ರಲ್ಲಿ ಸಿರಿಲ್‌ ವರ್ಮಾ ಬೆಳ್ಳಿ ಜಯಿಸಿದ್ದರು. ಟೂರ್ನಿ ಇತಿಹಾಸದಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಏಕೈಕ ಶಟ್ಲರ್‌ ಎನ್ನುವ ದಾಖಲೆ ಸೈನಾ ನೆಹ್ವಾಲ್‌ ಹೆಸರಿನಲ್ಲಿದೆ. ಅವರು 2008ರಲ್ಲಿ ಚಾಂಪಿಯನ್‌ ಆಗಿದ್ದರು. 1996ರಲ್ಲಿ ಅಪರ್ಣಾ ಪೋಪಟ್‌ ಮಹಿಳಾ ಸಿಂಗಲ್ಸ್‌ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2006ರಲ್ಲಿ ಸೈನಾ ಕೂಡ ಬೆಳ್ಳಿ ಗೆದ್ದಿದ್ದರು.