ಮೈಸೂರು(ಫೆ.13): ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಫೆ.13 ರಿಂದ 16ರವರೆಗೆ ಭಾರತ ‘ಎ’ ಮತ್ತು ಇಂಗ್ಲೆಂಡ್‌ ಲಯನ್ಸ್‌ ನಡುವೆ 2ನೇ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯಲಿದೆ. ಕೇರಳದ ವೈನಾಡ್‌ನಲ್ಲಿ ನಡೆದಿದ್ದ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. 

ಇದನ್ನೂ ಓದಿ: 2019ರ ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ ಶೇನ್ ವಾರ್ನ್!

ಸರಣಿಯ 2ನೇ ಹಾಗೂ ಕೊನೆಯ 4 ದಿನಗಳ ಟೆಸ್ಟ್‌ ಪಂದ ಇದಾಗಿದ್ದು, ಭಾರತ ‘ಎ’ ತಂಡವನ್ನು ಕನ್ನಡಿಗ ಕೆ.ಎಲ್‌.ರಾಹುಲ್‌ ಮುನ್ನಡೆಸಲಿದ್ದಾರೆ. ಪ್ರಿಯಾಂಕ್‌ ಪಾಂಚಾಲ್‌, ಅಭಿಮನ್ಯು ಈಶ್ವರನ್‌, ಕೆ.ಎಸ್‌.ಭರತ್‌, ಶಾರ್ದೂಲ್‌ ಠಾಕೂರ್‌, ಸವ್‌ದೀಪ್‌ ಸೈನಿಯಂತಹ ಯುವ ಪ್ರತಿಭೆಗಳು ಭಾರತ ‘ಎ’ ತಂಡದಲ್ಲಿದ್ದಾರೆ. ಇಂಗ್ಲೆಂಡ್‌ ಲಯನ್ಸ್‌ ತಂಡವನ್ನು ಸ್ಯಾಮ್‌ ಬಿಲ್ಲಿಂಗ್ಸ್‌ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಮುದ್ದು ಮಗಳ ವಿಡಿಯೋ ವೈರಲ್ !

ಉಚಿತ ಪ್ರವೇಶ:ಪಂದ್ಯ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ.