Asianet Suvarna News Asianet Suvarna News

ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: 4-0 ಮುನ್ನಡೆ!

ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡದ ಗೆಲುವಿನ ಓಟ ಮುಂದುವರಿದಿದೆ. 4ನೇ ಪಂದ್ಯದಲ್ಲೂ ಇಂಗ್ಲೆಂಡ್ ಸೋಲಿಗೆ ಶರಣಾಯಿತು.  5 ಪಂದ್ಯಗಳ ಸರಣಿಯಲ್ಲಿ ರಹಾನೆ ಸೈನ್ಯ 4-0 ಮುನ್ನಡೆ  ಸಾಧಿಸಿದೆ. ಇಲ್ಲಿದೆ ಹೈಲೈಟ್ಸ್

India A vs England Lions Rahane boys beat lions by 6 wickets
Author
Bengaluru, First Published Jan 30, 2019, 9:14 AM IST

ತಿರುವನಂತಪುರಂ(ಜ.30): ರಿಷಭ್‌ ಪಂತ್‌(73) ಅಜೇಯ ಅರ್ಧಶತಕ ಮತ್ತು ಶಾರ್ದೂಲ್‌ ಠಾಕೂರ್‌ (49ಕ್ಕೆ 4) ಆಕರ್ಷಕ ಬೌಲಿಂಗ್‌ ನೆರವಿನಿಂದ ಭಾರತ ‘ಎ’ ತಂಡ ಮಂಗಳವಾರ  ನಡೆದ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ 4ನೇ ಅನಧಿಕೃತ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿತು. 

ಇದನ್ನೂ ಓದಿ: 2020 ಟಿ20 ವಿಶ್ವಕಪ್: ಗುಂಪು ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ!

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್ 8 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿತು. ಒಲ್ಲಿ ಪೊಪ್ 65 ರನ್ ಸಿಡಿಸಿದರೆ, ಸ್ಟೀವನ್ ಮುಲಾನೆ 58 ರನ್ ಕಾಣಿಕೆ ನೀಡಿದರು. ಭಾರತದ ಪರ ಶಾರ್ದೂಲ್ ಠಾಕೂರ್ 4 ಹಾಗೂ ರಾಹುಲ್ ಚಹಾರ್ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಒಂದು ಆಲ್ರೌಂಡರ್ ಸ್ಥಾನಕ್ಕೆ ಸ್ಪರ್ಧಾತ್ಮಕ ಪೈಪೋಟಿ-ಜಾಧವ್

222 ರನ್ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಕೆಎಲ್ ರಾಹುಲ್ 42 ರನ್ ಕಾಣಿಕೆ ನೀಡಿದರು. ರಿಷಬ್ ಪಂತ್ ಅಜೇಯ 73 ಹಾಗೂ ದೀಪಕ್ ಹೂಡ ಅಜೇಯ 47 ರನ್ ಸಿಡಿಸೋ ಮೂಲಕ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Follow Us:
Download App:
  • android
  • ios