ಬೇ ಓವಲ್(ಜ.26): ಟೀಂ ಇಂಡಿಯಾದಲ್ಲಿ ಸ್ಮರ್ಧಾತ್ಮಕ ಪೈಪೋಟಿ ಹೆಚ್ಚಾಗುತ್ತಿದೆ. ಪ್ರತಿ ಸ್ಥಾನಕ್ಕೂ ಪ್ರತಿಭಾನ್ವಿತ ಕ್ರಿಕೆಟಿಗರು ಪೈಪೋಟಿ ನಡೆಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಪೈಪೋಟಿ ಕುರಿತು ಕೇದಾರ್ ಜಾಧವ್ ಮಾತನಾಡಿದ್ದಾರೆ.  ಒಂದು ಆಲ್ರೌಂಡರ್ ಸ್ಥಾನಕ್ಕೆ ಹಲವರು ಪೈಪೋಟಿ ನಡೆಸುತ್ತಿರುವುದು ಉತ್ತಮ ಎಂದು ಕ್ರಿಕೆಟಿಗ ಕೇದಾರ್ ಜಾಧವ್ ಹೇಳಿದ್ದಾರೆ. 

ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ ಡಬಲ್-ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು!

ಟೀಂ ಇಂಡಿಯಾದಲ್ಲಿರುವ ಒಂದು ಆಲ್ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಿಜಯ್ ಶಂಕರ್ ಸೇರಿದಂತೆ ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠವಾಗಲಿದೆ. 2019ರ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಇದು ಉತ್ತಮ ಬೆಳೆವಣಿಗೆ ಎಂದಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ಪಾಂಡ್ಯ-ಭಾರತ ಎ ತಂಡಕ್ಕೆ ರಾಹುಲ್‌ ಆಯ್ಕೆ!

ನ್ಯೂಜಿಲೆಂಡ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಕೇದಾರ್ ಜಾದವ್ ಅಂತಿಮ 10 ಎಸೆತದಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 22 ರನ್ ಸಿಡಿಸಿದ್ದಾರೆ. ಇನ್ನು6 ಓವರ್ ಬೌಲಿಂಗ್ ಮಾಡಿದ ಕೇದಾರ್ 1 ವಿಕೆಟ್ ಕಬಳಿಸಿದ್ದಾರೆ.