ರೋಚಕ ಜಯದೊಂದಿಗೆ ಸರಣಿ ಗೆದ್ದ ಭಾರತ :ಗೆಲುವು ತಂದುಕೊಟ್ಟ ಭುವಿ

First Published 25, Feb 2018, 12:28 AM IST
IND win by 7 runs clinch series
Highlights

ಭುವಿಗೆ  ಹೇಂಡ್ರಿಕ್ಸ್ ಔಟಾದರು.  ಡುಮಿನಿ ಭರ್ಜರಿ ಆಟವಾಡುತ್ತಾ ಹೋದರೂ ಮಿಲ್ಲರ್  23 ಚಂಡುಗಳಲ್ಲಿ 24 ರನ್ ಗಳಿಸಿ ರೈನಾಗೆ ಬಲಿಯಾದರು.

ಕೇಪ್'ಟೌನ್(ಫೆ.24): ಅಂತಿಮ ಓವರ್'ನಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್'ನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ  7 ರನ್'ಗಳ ಜಯ ಸಾಧಿಸುವುದರೊಂದಿಗೆ  3 ಪಂದ್ಯಗಳ ಟಿ20 ಸರಣಿಯನ್ನು 2-1 ಸರಣಿ ಜಯಗಳಿಸಿತು.

173 ರನ್'ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ ಓವರ್'ನಲ್ಲಿ 19 ರನ್'ಗಳು ಬೇಕಾಗಿತ್ತು. ವೇಗಿ ಭುವನೇಶ್ವರ್ ಕುಮಾರ್  ಮೊದಲ ಬಾಲ್'ನಲ್ಲಿ ಒಂದು ರನ್ ಕೊಟ್ಟು 2ನೇ ಚಂಡಿನಲ್ಲಿ 4 ರನ್ ಹೊಡೆಸಿಕೊಂಡಾಗ ಸೋಲಿನ ಛಾಯೆ ಕಾಣಿಸಿತ್ತು. ಆದರೆ ಅಂತಿಮ  5 ಎಸೆತದಲ್ಲಿ 6 ರನ್'ಗಳನ್ನು ನೀಡಿ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟರು.

ಡುಮಿನಿ, ಜೋಂಕರ್ ಆಟ ವ್ಯರ್ಥ  

ಟೀಂ ಇಂಡಿಯಾ ನೀಡಿದ 173 ರನ್'ಗಳನ್ನು ಬೆನ್ನಟ್ಟಿದ ಹರಣಿ ನೇತೃತ್ವದ ಡುಮಿನಿ ತಂಡ  3ನೇ ಓವರ್'ನಲ್ಲಿಯೇ ವೇಗಿ ಭುವಿಗೆ  ಹೇಂಡ್ರಿಕ್ಸ್ ಔಟಾದರು.  ಡುಮಿನಿ ಭರ್ಜರಿ ಆಟವಾಡುತ್ತಾ ಹೋದರೂ ಮಿಲ್ಲರ್  23 ಚಂಡುಗಳಲ್ಲಿ 24 ರನ್ ಗಳಿಸಿ ರೈನಾಗೆ ಬಲಿಯಾದರು.

2ನೇ ಪಂದ್ಯದಲ್ಲಿ ಉತ್ತಮ ಆಟವಾಡಿದ ಕ್ಲೇಸೆನ್ ಹೆಚ್ಚು ಹೊತ್ತು ನಿಲ್ಲಲಿಲ್ಲ.ಡುಮಿನಿ(55: 41 ಎಸೆತ, 3 ಸಿಕ್ಸ್'ರ್, 2 ಬೌಂಡರಿ) ಔಟದ ನಂತರ ಜೋಂಕರ್ ಹಾಗೂ ಬೆಹದರೀನ್(15) ಗೆಲುವಿನ ಭರವಸೆ ನೀಡಿದರೂ ಅಂತಿಮವಾಗಿ 20 ಓವರ್'ಗಳಲ್ಲಿ 165 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಟೀಂ ಇಂಡಿಯಾ ಪರ ಭುವನೇಶ್ವರ್ 24/2 ಹಾಗೂ ಉಳಿದ ನಾಲ್ವರು ಬೌಲರ್'ಗಳು ತಲಾ ಒಂದು ವಿಕೇಟ್ ಪಡೆದರು.       

ರೈನಾ, ಧವನ್ ಉತ್ತಮ ಆಟ

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2ನೇ ಓವರ್'ನಲ್ಲಿ ಶಿಖರ್ ಧವನ್ ಅವರ ವಿಕೇಟ್ ಕಳೆದುಕೊಂಡಿತು. 11 ರನ್ ಗಳಿಸಿದ ಸ್ಫೋಟಕ ಆಟಗಾರ ರೋಹಿತ್ ದಾಲಾ ಬೌಲಿಂಗ್'ನಲ್ಲಿ ಎಲ್'ಬಿ ಬಲೆಗೆ ಬಿದ್ದರು.

ನಂತರ ಶಿಖರ್ ಧವನ್ ಹಾಗೂ ಸುರೇಶ್ ರೈನಾ ಅವರು 2ನೇ ವಿಕೇಟ್ ಜೊತೆಯಾಟಕ್ಕೆ 65 ರನ್'ಗಳ ಪೇರಿಸಿದರು. 40 ಚಂಡುಗಳನ್ನು ಎದುರಿಸಿದ ಧವನ್ 3 ಬೌಂಡರಿಗಳೊಂದಿಗೆ 47 ರನ್ ಬಾರಿಸಿ ರನ್ ಔಟ್ ಆದರು. ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸ್'ರ್'ನೊಂದಿಗೆ 43 ರನ್ ಚಚ್ಚಿದರು.

ಕನ್ನಡಿಗ ಮನೀಶ್ ಪಾಂಡೆ ಹೆಚ್ಚು ಕಾಲವಿರದೆ 10 ಬಾಲ್'ಗಳಲ್ಲಿ 1 ಸಿಕ್ಸ್'ರ್'ನೊಂದಿಗೆ 13 ರನ್ ಬಾರಿಸಿ ಬೇಗನೆ ಔಟಾದರು. ಪಾಂಡ್ಯ(21) ಹಾಗೂ ವಿಕೇಟ್ ಕೀಪರ್ ಧೋನಿ(12) 5ನೇ ವಿಕೇಟ್ ನಷ್ಟಕ್ಕೆ 25 ರನ್ ಪೇರಿಸಿದರು. ದಿನೇಶ್ ಕಾರ್ತಿಕ್ 6 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 13 ರನ್ ಬಾರಿಸಿದರು. ದಕ್ಷಿಣ ಆಫ್ರಿಕಾ ತಂಡ 20 ಓವರ್'ಗಳಲ್ಲಿ 172/7 ರನ್ ಕಲೆ ಹಾಕಿತು. ಹರಣಿ ತಂಡದ ಪರ ಡಾಲಾ 35/3 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಭಾರತ 20 ಓವರ್'ಗಳಲ್ಲಿ 172

(ಧವನ್ 47, ರೈನಾ 43, ಡಾಲಾ 35/3)

ದಕ್ಷಿಣ ಆಫ್ರಿಕಾ 20 ಓವರ್'ಗಳಲ್ಲಿ 165/6

(ಡುಮಿನಿ 55, ಜೋಂಕರ್ 49,ಭುವಿ 24/2 )

ಭಾರತಕ್ಕೆ 2-1 ಸರಣಿ ಜಯ

ಪಂದ್ಯ ಶ್ರೇಷ್ಠ : ಸುರೇಶ್ ರೈನಾ

ಸರಣಿ ಶ್ರೇಷ್ಠ: ಆರ್. ಭುವನೇಶ್ವರ್ ಕುಮಾರ್

loader