ದುಬೈ[ಫೆ.04]: ಮಹೇಂದ್ರ ಸಿಂಗ್ ಧೋನಿ ಚಾಣಾಕ್ಷ ವಿಕೆಟ್ ಕೀಪರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಎದುರಾಳಿ ಬ್ಯಾಟ್ಸ್’ಮನ್ ಮೈಂಡ್’ರೀಡ್ ಮಾಡುವ ಕಲೆ ಕರಗತ ಮಾಡಿಕೊಂಡಿರುವ ಧೋನಿ, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲೂ ಚುರುಕಿನ ವಿಕೆಟ್’ಕೀಪಿಂಗ್ ಮಾಡುವ ಮೂಲಕ ಅಭಿಮಾನಿಗಳು ಮಾತ್ರವಲ್ಲದೆ ಐಸಿಸಿ ಮನಗೆಲ್ಲುವಲ್ಲೂ ಯಶಸ್ವಿಯಾಗಿದ್ದಾರೆ.

ಸರಣಿ ಸೋಲಿನ ಬೆನ್ನಲ್ಲೇ ಕಿವೀಸ್’ಗೆ ಮತ್ತೊಂದು ಶಾಕ್..!

ಭಾರತ-ನ್ಯೂಜಿಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಜೇಮ್ಸ್ ನೀಶಮ್ ಅವರನ್ನು ಬಲಿಪಡೆಯುವ ಮೂಲಕ ಧೋನಿ ಟೀಂ ಇಂಡಿಯಾ ಮೇಲುಗೈ ಸಾಧಿಸಲು ನೆರವಾದರು. ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ನೀಶಮ್ ಅವರ ವಿಕೆಟ್ ಪಡೆದ ವಿಡಿಯೋ ವೈರಲ್ ಆಗಿತ್ತು.

ICC ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಕೊಹ್ಲಿ, ಬುಮ್ರಾ ನಂ.1, ಟೀಂ ಇಂಡಿಯಾ ನಂ.2

ಹೀಗಿತ್ತು ಧೋನಿ ಮಾಡಿದ ಔಟ್:

ಜಪಾನಿನ ಕಲಾವಿದ ಯೂಕೋ ಓನೊ, ಬದುಕನ್ನು ಸುಂದರವಾಗಿಟ್ಟುಕೊಳ್ಳಲು ಸಲಹೆ ನೀಡಿ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ[ಐಸಿಸಿ], ’ಧೋನಿ ವಿಕೆಟ್ ಹಿಂದೆ ಇದ್ದಾಗ, ಯಾವತ್ತೂ ಕ್ರೀಸ್ ಬಿಟ್ಟು ಹೊರಗೆ ಹೋಗಬೇಡಿ’ ಎಂದು ಮರು ಟ್ವೀಟ್ ಮಾಡಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ-ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಸರಣಿಯನ್ನು ಭಾರತ 4-1 ಅಂತರದಿಂದ ಜಯಿಸಿತ್ತು. ಇದೀಗ ಮೂರು ಪಂದ್ಯಗಳ ಟಿ20 ಸರಣಿ ಫೆಬ್ರವರಿ 06ರಿಂದ ಆರಂಭವಾಗಲಿದೆ.