ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಕುರ್ರಾನ್..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 5:16 PM IST
Ind Vs Eng Sam Curran double whammy dismisses Murali Vijay Rahul
Highlights

ಇಂಗ್ಲೆಂಡ್ ಪರ 14ನೇ ಓವರ್ ದಾಳಿ ಮಾಡಿದ ಸ್ಯಾಮ್ ಕುರ್ರಾನ್ ಒಂದೇ ಓವರ್’ನಲ್ಲಿ ವಿಜಯ್ ಹಾಗೂ ರಾಹುಲ್ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದ್ದಾರೆ. ಮರು ಓವರ್’ನಲ್ಲಿ ಧವನ್ ಬಲಿ ಪಡೆಯುವಲ್ಲಿ ಮತ್ತೆ ಕುರ್ರಾನ್ ಯಶಸ್ವಿಯಾಗಿದ್ದಾರೆ.

ಎಡ್ಜ್’ಬಾಸ್ಟನ್[ಆ.02]: ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್’ನ ಎರಡನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದ್ದು ಆರಂಭಿಕ ಮುರುಳಿ ವಿಜಯ್[20] ಹಾಗೂ ಕೆ.ಎಲ್ ರಾಹುಲ್[4] ಹಾಗೂ ಶಿಖರ್ ಧವನ್ ಪೆವಿಲಿಯನ್ ಸೇರಿದ್ದಾರೆ. ಮೂರು ವಿಕೆಟ್ ಕಬಳಿಸುವಲ್ಲಿ ಕುರ್ರಾನ್ ಯಶಸ್ವಿಯಾಗಿದ್ದಾರೆ. ಕೇವಲ 8 ಎಸೆತಗಳ ಅಂತರದಲ್ಲಿ ಧವನ್, ವಿಜಯ್ ಹಾಗೂ ರಾಹುಲ್ ಪೆವಿಲಿಯನ್ ಸೇರಿಕೊಂಡು ನಿರಾಸೆ ಅನುಭವಿಸಿದರು.

ಇಂಗ್ಲೆಂಡ್ ತಂಡವನ್ನು 287 ರನ್’ಗಳಿಗೆ ಕಟ್ಟಿಹಾಕಿದ್ದ ಟೀಂ ಇಂಡಿಯಾ ಮೊದಲ ವಿಕೆಟ್’ಗೆ ಉತ್ತಮ ಜತೆಯಾಟವಾಡಿತು. ಧವನ್-ವಿಜಯ್ ಜೋಡಿ 50 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಇಂಗ್ಲೆಂಡ್ ಪರ 14ನೇ ಓವರ್ ದಾಳಿ ಮಾಡಿದ ಸ್ಯಾಮ್ ಕುರ್ರಾನ್ ಒಂದೇ ಓವರ್’ನಲ್ಲಿ ವಿಜಯ್ ಹಾಗೂ ರಾಹುಲ್ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದರು. ಬಳಿಕ ಮರು ಓವರ್’ನಲ್ಲೇ ಧವನ್ ಅವರನ್ನೂ ಬಲಿ ಪಡೆಯುವಲ್ಲಿ ಕುರ್ರಾನ್ ಯಶಸ್ವಿಯಾಗಿದ್ದಾರೆ.

16 ಓವರ್ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ ರನ್ ಗಳಿಸಿದೆ. ಕೊಹ್ಲಿ 0* ಬ್ಯಾಟಿಂಗ್ ನಡೆಸುತ್ತಿದ್ದಾರೆ. 

ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 287/10
ಭಾರತ: 59/3

loader