ಮತ್ತೊಂದು ಸೋಲಿನ ಭೀತಿಯಲ್ಲಿ ವಿರಾಟ್ ಪಡೆ

IND in trouble at Centurion
Highlights

ಇದಕ್ಕೂ ಮೊದಲು ಡುಪ್ಲೆಸಿಸ್ ಹಾಗೂ ಫಿಲಾಂಡರ್ ಸಮಯೋಚಿತ ಜತೆಯಾಟದ ನೆರವಿನಿಂದ ಎರಡನೇ ಇನಿಂಗ್ಸ್'ನಲ್ಲಿ 258 ರನ್ ಕಲೆಹಾಕುವುದರೊಂದಿಗೆ ಭಾರತಕ್ಕೆ 287 ರನ್'ಗಳ ಸವಾಲಿನ ಗುರಿ ನೀಡಿತ್ತು.

ಸೆಂಚೂರಿಯನ್(ಜ.16): ಮತ್ತೊಮ್ಮೆ ಟೀಂ ಇಂಡಿಯಾ ಅಗ್ರ ಕ್ರಮಾಂಕದ ಬ್ಯಾಟ್ಸ್'ಮನ್'ಗಳು ವಿಫಲವಾಗಿದ್ದರಿಂದ ಟೀಂ ಇಂಡಿಯಾ ಎರಡನೇ ಟೆಸ್ಟ್'ನಲ್ಲೂ ಸೋಲಿನ ಭೀತಿ ಎದುರಾಗಿದೆ. ಈಗಾಗಲೇ ಮೊದಲ ಟೆಸ್ಟ್ ಸೋತು ಸರಣಿಯಲ್ಲಿ 1-0 ಹಿನ್ನಡೆಯಲ್ಲಿರುವ ವಿರಾಟ್ ಪಡೆ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಕೊನೆಯ ಪಕ್ಷ ಈ ಪಂದ್ಯವನ್ನು ಡ್ರಾ ಆದರೂ ಮಾಡಿಕೊಳ್ಳಬೇಕಿದೆ.

ಗೆಲ್ಲಲು 287 ರನ್'ಗಳ ಗುರಿ ಬೆನ್ನತಿದ ಟೀಂ ಇಂಡಿಯಾ 4ನೇ ದಿನದಂತ್ಯದ ವೇಳೆಗೆ 35/3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ತಲುಪಿದೆ. ಮುರುಳಿ ವಿಜಯ್'ರನ್ನು ಕ್ಲೀನ್ ಬೌಲ್ಡ್ ಮಾಡಿದ ರಬಾಡ ಟೀಂ ಇಂಡಿಯಾಗೆ ಮೊದಲ ಆಘಾತ ನೀಡಿದರು. ಇದರ ಬೆನ್ನಲ್ಲೇ ಲುಂಗಿ ಎನ್ಗಿಡಿ ಮೊದಲ ಎಸೆತದಲ್ಲೇ ರಾಹುಲ್ 4 ರನ್'ಗಳಿಸಿ ಗೂಡು ಸೇರಿದರು. ಇನ್ನು ನಾಯಕ ವಿರಾಟ್ ಕೊಹ್ಲಿ ಆಟ ಕೇವಲ 5 ರನ್'ಗಳಿಗೆ ಸೀಮಿತವಾಯಿತು. ಕೊನೆಯ ದಿನಕ್ಕೆ ಪೂಜಾರ 11 ಹಾಗೂ ಪಾರ್ಥಿವ್ ಪಟೇಲ್ 5 ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಡುಪ್ಲೆಸಿಸ್ ಹಾಗೂ ಫಿಲಾಂಡರ್ ಸಮಯೋಚಿತ ಜತೆಯಾಟದ ನೆರವಿನಿಂದ ಎರಡನೇ ಇನಿಂಗ್ಸ್'ನಲ್ಲಿ 258 ರನ್ ಕಲೆಹಾಕುವುದರೊಂದಿಗೆ ಭಾರತಕ್ಕೆ 287 ರನ್'ಗಳ ಸವಾಲಿನ ಗುರಿ ನೀಡಿತ್ತು.

ಭಾರತ ಪರ ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3, ಇಶಾಂತ್ ಶರ್ಮಾ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 335&258

ಎಬಿ ಡಿವಿಲಿಯರ್ಸ್: 80

ಶಮಿ: 49/4

ಭಾರತ:307&35/3

ಪೂಜಾರ: 11*

ಲುಂಗಿ ಎನ್ಗಿಡಿ: 14/2

(* ನಾಲ್ಕನೇ ದಿನದಂತ್ಯಕ್ಕೆ)

 

loader