ಇನ್ನು ಸುಲಭ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ಕೇವಲ ಮೂರು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಆಫ್ಘಾನ್ ಪರ ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ಮೊಹಮ್ಮದ್ ಶೆಹಜಾದ್ 84 ಹಾಗೂ ರೆಹಮತ್ ಶಾ 51 ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಗೇಲ್ 2 ವಿಕೆಟ್ ಪಡೆದರು.

ಹರಾರೆ(ಮಾ.25): ವಿಶ್ವಕಪ್ ಟೂರ್ನಿಗೆ ಈಗಾಗಲೇ ಅರ್ಹತೆಗಿಟ್ಟಿಸಿಕೊಂಡಿರುವ ಆಫ್ಘಾನಿಸ್ತಾನ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ವೆಸ್ಟ್'ಇಂಡಿಸ್ ತಂಡವನ್ನು 7 ವಿಕೆಟ್'ಗಳಿಂದ ಅನಾಯಾಸವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್'ಇಂಡಿಸ್ ತಂಡ 205 ರನ್'ಗಳಿಗೆ ಸರ್ವಪತನ ಕಂಡಿತು. ಕೆರಿಬಿಯನ್ ಪಡೆಯ ದಿಗ್ಗಜರು ಆಫ್ಘಾನ್ ಬೌಲಿಂಗ್ ಎದುರು ತತ್ತರಿಸಿಹೋದರು. ಮುಜೀಬ್ ಉರ್ ರೆಹಮಾನ್ 4 ವಿಕೆಟ್ ಪಡೆದು ಮಿಂಚಿದರು.

ಇನ್ನು ಸುಲಭ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ಕೇವಲ ಮೂರು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಆಫ್ಘಾನ್ ಪರ ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ಮೊಹಮ್ಮದ್ ಶೆಹಜಾದ್ 84 ಹಾಗೂ ರೆಹಮತ್ ಶಾ 51 ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಗೇಲ್ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್ 204/10

ಪೊವೆಲ್ 44 ಮುಜೀಬ್ 43/4

ಆಫ್ಘಾನಿಸ್ತಾನ 206/3

ಶಹಜಾದ್ 84

ಗೇಲ್ 38/2