ನವದೆಹಲಿ: ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ನಿರ್ಧಾರ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಅಂಬಟಿ ರಾಯುಡು ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ ಎಂದು ಬಿಸಿಸಿಐ ಆಡಳಿತ ಸಮಿತಿ ಬುಧವಾರ ತಿಳಿಸಿದೆ.

ವಿಶ್ವಕಪ್’ನಿಂದ ಗೇಟ್’ಪಾಸ್: ಆಯ್ಕೆ ಸಮಿತಿಗೆ ಟಾಂಗ್ ಕೊಟ್ಟ ರಾಯಡು..!

ವಿಶ್ವಕಪ್ ವೀಕ್ಷಣೆಗೆ ಹೊಸ 3ಡಿ ಕನ್ನಡಕ ಬುಕ್ ಮಾಡಿದ್ದೇನೆ ಎಂದು ಮಂಗಳವಾರ ರಾಯುಡು ಟ್ವೀಟ್ ಮಾಡಿದ್ದರು. ಈ ಮೂಲಕ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್‌ರ ಕಾಲೆಳೆದ ರಾಯುಡು, ತಮಾಷೆ ಮೂಲಕವೇ ತಮ್ಮ ಹತಾಶೆ ವ್ಯಕ್ತಪಡಿಸಿದ್ದರು. 

ರಾಯುಡು ಮಾಡಿರುವ ಟ್ವೀಟ್ ನಮ್ಮ ಗಮನಕ್ಕೆ ಬಂದಿದೆ, ಆದರೆ ಬಿಸಿಸಿಐ ಆಯ್ಕೆ ನೀತಿಯನ್ನು ರಾಯುಡು ಅವರು ನೇರವಾಗಿ ಟೀಕಿಸಿಲ್ಲ. ಹೀಗಾಗಿ ರಾಯುಡು ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.