ದುಬೈ(ಡಿ.22): ಭಾರತದಲ್ಲಿ ತೆರಿಗೆ ವಿನಾಯಿತಿ ಸಿಗದೆ 160 ಕೋಟಿ ಕಳೆದುಕೊಂಡಿದ್ದ ಐಸಿಸಿ ಇದೀಗ ಬಿಸಿಸಿಐಗ ಖಡಕ್ ವಾರ್ನಿಂಗ್ ನೀಡಿದೆ. ಹೆಚ್ಚುವರಿ ಹಣವನ್ನ ಶೀಘ್ರದಲ್ಲೇ ಪಾವತಿಸದಿದ್ದಲ್ಲಿ, 2023ರ ವಿಶ್ವಕಪ್ ಹಾಗೂ 2021ರ ಚಾಂಪಿಯನ್ಸ್ ಆತಿಥ್ಯದಿಂದ ಹೊರನಡೆಯಿರಿ ಎಂದು ಐಸಿಸಿ, ಬಿಸಿಸಿಐಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಹರಾಜಿನ ಬಳಿಕ ಒಂದಾದ ಗುರು-ಶಿಷ್ಯರು..! ತೆಂಡುಲ್ಕರ್ ಟ್ವೀಟ್ ಅಪ್ಪಟ ಬಂಗಾರ

2016ರ ಟಿ20 ವಿಶ್ವಕಪ್ ಆಯೋಜನೆಗೆ ಭಾರತದಲ್ಲಿ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲ. ಹೀಗಾಗಿ ಐಸಿಸಿಗೆ ಬರುವ ಆದಾಯದಲ್ಲಿ 160 ಕೋಟಿ ರೂಪಾಯಿ ನಷ್ಟವಾಗಿದೆ. ಈ ಹೆಚ್ಚುವರಿ ಹೊರೆಯನ್ನ ಬಿಸಿಸಿಐ ಭರಿಸಬೇಕು ಎಂದು ಐಸಿಸಿ ಹೇಳಿದೆ. ಇದಕ್ಕಾಗಿ ಬಿಸಿಸಿಐಗೆ 10 ದಿನಗಳ ಕಾಲಾವಕಾಶವನ್ನ ಐಸಿಸಿ ನೀಡಿದೆ.

ಇದನ್ನೂ ಓದಿ: Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!

ಐಸಿಸಿ ಮಾತಿಗೆ ಬಗ್ಗದಿದ್ದರೆ, ಆದಾಯ ಹಂಚಿಕೆಯಲ್ಲಿ ಬಿಸಿಸಿಐ ಆದಾಯವನ್ನ ಕಡಿತಗೊಳಿಸಲಾಗುವುದು ಎಂದು ಐಸಿಸಿ ಸೂಚಿಸಿದೆ. ಇಷ್ಟೇ ಅಲ್ಲ ಮಾತು ಮೀರಿದರೆ ಕಾನೂನು ಕ್ರಮ ಜರುಗಿಸಲು ಐಸಿಸಿ ಮುಂದಾಗಿದೆ. ಇದೀಗ ಬಿಸಿಸಿಐ ಹಾಗೂ ಐಸಿಸಿ ಹಗ್ಗಜಗ್ಗಾಟ ಶುರುವಾಗಿದೆ. ಇದು ಸದ್ಯಕ್ಕೆ ಮುಗಿಯುವ  ಲಕ್ಷಣಗಳು ಗೋಚರಿಸುತ್ತಿಲ್ಲ.