ಭಾರತ-ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ-ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ತ್ರಿಕೋನ ಟಿ20 ಸರಣಿ ಮುಕ್ತಾಯದ ಬಳಿಕ ಇಂದು ಟಿ20 ಶ್ರೇಯಾಂಕ ಪ್ರಕಟಿಸಲಾಗಿದೆ. ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ನಾಯಕ ವಿಶ್ವದಾಖಲೆಯ 172 ರನ್ ಜತೆಗೆ ಅಜೇಯ 68 ರನ್ ಹಾಗೂ 16,3 ಮತ್ತು 47 ರನ್’ಗಳನ್ನು ಬಾರಿಸಿದ್ದ ಫಿಂಚ್ ಟಿ20 ಬ್ಯಾಟ್ಸ್’ಮನ್’ಗಳ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಅಗ್ರಸ್ಥಾನಕ್ಕೇರಿದ್ದಾರೆ.
ದುಬೈ[ಜು.09]: ಐಸಿಸಿ ನೂತನ ಟಿ20 ಬ್ಯಾಟ್ಸ್’ಮನ್’ಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ಆಸ್ಟ್ರೇಲಿಯಾ ಆ್ಯರೋನ್ ಫಿಂಚ್, ಪಾಕಿಸ್ತಾನದ ಫಖರ್ ಜಮಾನ್ ಹಾಗೂ ಭಾರತದ ಕೆ.ಎಲ್ ರಾಹುಲ್ ಮೊದಲ ಮೂರು ಸ್ಥಾನಗಳಿಗೆ ಲಗ್ಗೆಯಿಟ್ಟಿದ್ದಾರೆ.
ಭಾರತ-ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ-ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ತ್ರಿಕೋನ ಟಿ20 ಸರಣಿ ಮುಕ್ತಾಯದ ಬಳಿಕ ಇಂದು ಟಿ20 ಶ್ರೇಯಾಂಕ ಪ್ರಕಟಿಸಲಾಗಿದೆ. ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ನಾಯಕ ವಿಶ್ವದಾಖಲೆಯ 172 ರನ್ ಜತೆಗೆ ಅಜೇಯ 68 ರನ್ ಹಾಗೂ 16,3 ಮತ್ತು 47 ರನ್’ಗಳನ್ನು ಬಾರಿಸಿದ್ದ ಫಿಂಚ್ ಟಿ20 ಬ್ಯಾಟ್ಸ್’ಮನ್’ಗಳ ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಅಗ್ರಸ್ಥಾನಕ್ಕೇರಿದ್ದಾರೆ.
ಇನ್ನು ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್’ಮನ್ ಜಮಾನ್, ಸ್ಥಿರಪ್ರದರ್ಶನ ತೋರುತ್ತಿದ್ದು ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ 91 ರನ್ ಬಾರಿಸುವುದರೊಂದಿಗೆ ತಂಡದ ಸರಣಿ ಗೆಲುವಿಗೆ ಕಾರಣರಾಗಿದ್ದರು. ತ್ರಿಕೋನ ಸರಣಿಯಲ್ಲಿ 61, 6, 47, 73 ಹಾಗೂ 91 ರನ್ ಸಿಡಿಸಿ 842 ಅಂಕಗಳೊಂದಿಗೆ ಟಿ20 ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿಯೇ ಅಜೇಯ 101 ರನ್ ಸಿಡಿಸಿದ್ದರು. ಆದರೆ ಆ ಬಳಿಕ ದೊಡ್ಡ ಮೊತ್ತ ಕಲೆ ಹಾಕಲು[6 ಮತ್ತು 19] ರಾಹುಲ್’ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ರಾಹುಲ್’ಗೆ ಈ ಬಾರಿ ಅಗ್ರಸ್ಥಾನಕ್ಕೇರಲು ಉತ್ತಮ ಅವಕಾಶವಿತ್ತು.
ಇನ್ನು ಆಸ್ಟ್ರೇಲಿಯಾದ ಡಾರ್ಶಿ ಶಾರ್ಟ್ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಬಟ್ಲರ್ ಹಾಗೂ ಜೇಸನ್ ರಾಯ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ..