ತೆರಿಗೆ ವಿನಾಯ್ತಿ ಲಭ್ಯವಾಗದಿದ್ದರೆ, 2021ರ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರ ಭೀತಿ ಎದುರಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಐಸಿಸಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದುಬೈ: ತೆರಿಗೆ ವಿನಾಯ್ತಿ ಲಭ್ಯವಾಗದಿದ್ದರೆ, 2021ರ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರ ಭೀತಿ ಎದುರಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಐಸಿಸಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2016ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆದಿತ್ತು. ಈ ವೇಳೆ ಪ್ರಸಾರದ ಹಕ್ಕು ಪಡೆದಿದ್ದ ಸ್ಟಾರ್ ನೆಟ್‌ವರ್ಕ್ ವಾಹಿನಿ, ಟಿಡಿಎಸ್ (ಟ್ಯಾಕ್ಸ್ ಡಿಡೆಕ್ಟೆಡ್ ಸೋರ್ಸ್) ಮೂಲಕ ಭಾರತ ಸರ್ಕಾರಕ್ಕೆ 125 ಕೋಟಿ ಪಾವತಿಸಿತ್ತು.

ಇದೀಗ ಈ ಮೊತ್ತವನ್ನು ಮರಳಿ ಪಾವತಿಸುವಂತೆ ಐಸಿಸಿ, ಬಿಸಿಸಿಐ ಅನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದೊಮ್ಮೆ ಹೀಗಾದರೆ ಬಿಸಿಸಿಐಗೆ ಭಾರೀ ಹೊಡೆತ ಬೀಳಲಿದೆ.