ಕಳೆದ ಒಂದು ವರ್ಷದ ಸಾಧನೆಗಾಗಿ ಕೊಹ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮುಂಬೈ(ಜ.18): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯಿಂದ 2017ನೇ ಸಾಲಿನ ವಾರ್ಷಿಕ ಕ್ರಿಕೆಟ್ ಆಟಗಾರ ಹಾಗೂ ಐಸಿಸಿಯ ಏಕದಿನ ಹಾಗೂ ಟೆಸ್ಟ್ ತಂಡಗಳ ನಾಯಕಗಿಯೂ ಆಯ್ಕೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಒಂದು ವರ್ಷದ ಸಾಧನೆಗಾಗಿ ಕೊಹ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 29 ವರ್ಷದ ಕೊಹ್ಲಿ ಒಂದು ವರ್ಷದಲ್ಲಿ ಟೆಸ್ಟ್'ನಲ್ಲಿ 8 ಶತಕಗಳೊಂದಿಗೆ 2203, ಏಕದಿನ ಪಂದ್ಯಗಳಲ್ಲಿ 7 ಶತಕಗಳೊಂದಿಗೆ 1818 ಹಾಗೂ ಟಿ20ಯಲ್ಲಿ 299 ರನ್ ಪೇರಿಸಿದ್ದಾರೆ.

ಅದೇ ರೀತಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರನ್ನು ವಾರ್ಷಿಕ ಟೆಸ್ಟ್ ಆಟಗಾರನ ಪ್ರಶಸ್ತಿಗೆ ಭಾಜನರಾಗಿದ್ದಾರೆ.