ದುಬೈ(ಮಾ.17): ಐಸಿಸಿ ಕ್ರಿಕೆಟ್ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ನೂತನ ರ‍್ಯಾಂಕಿಂಗ್ ಪಟ್ಟಿ ಪ್ರಕಾರ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲಿಂಗ್ ವಿಭಾಗದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನ ಅಲಂಕರಿಸಿದ್ದಾರೆ. 

ಇದನ್ನೂ ಓದಿ: ಯೋಧರ ಕಲ್ಯಾಣ ನಿಧಿಗೆ ಬಿಸಿಸಿಐನಿಂದ 20 ಕೋಟಿ ರುಪಾಯಿ ದೇಣಿಗೆ

ಬ್ಯಾಟಿಂಗ್ ವಿಭಾಗದ ಟಾಪ್ 10 ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಾತ್ರ ಕಾಣಿಸಿಕೊಂಡಿದ್ದಾರೆ. ರೋಹಿತ್ 2ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಶಿಖರ್ ಧವನ್ 12ನೇ ಸ್ಥಾನದಲ್ಲಿದ್ದರೆ, ಅದ್ಬುತ ಪ್ರದರ್ಶನದ ಮೂಲಕ ಎಂ.ಎಸ್.ಧೋನಿ 20ನೇ ಸ್ಥಾನದಲ್ಲಿದ್ದಾರೆ. ಇನ್ನು11 ಸ್ಥಾನ ಬಡ್ತಿ ಪಡೆದ ಕೇದಾರ್ ಜಾಧವ್ 24ನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಏಕದಿನಕ್ಕೆ ವಿದಾಯ ಘೋಷಿಸಿದ ಸೌತ್ಆಫ್ರಿಕಾ ಸ್ಟಾರ್ ಆಲ್ರೌಂಡರ್!

ಬೌಲಿಂಗ್ ವಿಭಾಗದ ಅಗ್ರಸ್ಥಾನ ಬುಮ್ರಾ ಅಲಂಕರಿಸಿದ್ದರೆ, ಕುಲ್ದೀಪ್ ಯಾದವ್ 6ನೇ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಹಾಲ್ 8  ಹಾಗೂ ಭುವನೇಶ್ವರ್ ಕುಮಾರ್ 16ನೇ ಸ್ಥಾನದಲ್ಲಿದ್ದಾರೆ. ಸದ್ಯ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಿಲ್ಲ.  ಆದರೆ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟಿಗರು ಬ್ಯೂಸಿಯಾಗಲಿದ್ದಾರೆ.