ಮುಂಬೈ(ಜ.24): ಹಲವು ಖ್ಯಾತನಾಮ ಚಲನಚಿತ್ರ ತಾರೆಯರ ಮಾಲೀಕತ್ವ ಹೊಂದಿರುವ ವರ್ಣರಂಜಿತ ಐಪಿಎಲ್ ಕ್ರಿಕೆಟ್ ಲೀಗ್ ಶೀಘ್ರವೇ ಇನ್ನಷ್ಟು ರೋಚಕಗೊಳ್ಳುವ ಸಾಧ್ಯತೆ ಇದೆ. ಕಾರಣ, ಐಪಿಎಲ್ ತಂಡದಲ್ಲಿ ಪಾಲು ಖರೀದಿಗೆ ಬಾಲಿವುಡ್‌ನ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕುಟುಂಬ ಅತೀವ ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. 

IPL ಆರಂಭಕ್ಕೂ ಮುನ್ನ RCB ಪಡೆಗೆ ಮುಖಭಂಗ..!

ಬಚ್ಚನ್ ಕುಟುಂಬ ಈಗಾಗಲೇ ಐಎಸ್‌ಎಲ್‌ನಲ್ಲಿ ಚೆನ್ನೈ ಎಫ್‌ಸಿ, ಪ್ರೊ ಕಬಡ್ಡಿಯಲ್ಲಿ ಜೈಪುರ ತಂಡಗಳ ಮಾಲೀಕತ್ವ ಹೊಂದಿದೆ. ಅಭಿಷೇಕ್ ಅವರು ಈಗಾಗಲೇ ಸಿಎಸ್‌ಕೆ, ರಾಜಸ್ಥಾನ ಫ್ರಾಂಚೈಸಿಯೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ‘ರಾಜಸ್ಥಾನ ಸಹ ಮಾಲಿಕ ಮನೋಜ್ ಬದಲೆರನ್ನು ಅಭಿಷೇಕ್ ಲಂಡನ್‌ನಲ್ಲಿ ಈ ಹಿಂದೆ ಭೇಟಿಯಾಗಿದ್ದರು’ ಎಂದು ಎಬಿಕಾರ್ಪ್ ಸಿಇಒ ರಮೇಶ್ ಪುಲಪಾಕ ಹೇಳಿದ್ದಾರೆ. 

ಭಾರತದಲ್ಲೇ ನಡೆಯಲಿದೆ IPL: ನಿಗದಿಗಿಂತ ಮೊದಲೇ IPL ಕಿಕ್ ಸ್ಟಾರ್ಟ್

ರಾಜಸ್ಥಾನ್ ಇನ್ನೂ ಲಲಿತ್ ಮೋದಿ ಕುಟುಂಬದ ಹಿಡಿತದಲ್ಲೇ ಇದೆ. ಆದರೆ ತಂಡದಲ್ಲಿನ ಇತರೆ ಪಾಲುದಾರರು, ಪಾಲು ಮಾರಾಟಕ್ಕೆ ಆಸಕ್ತಿ ಹೊಂದಿದ್ದಾರೆ. ಈ ಪಾಲು ಖರೀದಿಗೆ ಬಚ್ಚನ್ ಕುಟುಂಬ ಆಸಕ್ತಿ ಹೊಂದಿದೆ ಎನ್ನಲಾಗಿದೆ. ಈ ಹಿಂದೆ ರಾಯಲ್ಸ್‌ಗೆ ಶಿಲ್ಪಾ ಶೆಟ್ಟಿ ಮಾಲಕಿಯಾಗಿದ್ದರು. ಈಗ ಮತ್ತೊಬ್ಬ ಕನ್ನಡತಿ ಬಚ್ಚನ್ ಸೊಸೆ ಐಶ್ವರ್ಯಾ ಮಾಲಕಿಯಾಗಲಿದ್ದರೆ.  ರಾಜಸ್ಥಾನ ರಾಯಲ್ಸ್ 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಚಾಂಪಿಯಯನ್ ಪಟ್ಟ ಅಲಂಕರಿಸಿದರೆ, ಎಂ.ಎಸ್ ಧೋನಿ 2010, 2011 ಹಾಗೂ 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಐಪಿಎಲ್‌ನಿಂದ 100 ಕೋಟಿ ಸಂಪಾದಿಸಿದ ಟೀಂ ಇಂಡಿಯಾ ಕ್ರಿಕೆಟರ್ಸ್!