ಕಿವೀಸ್ ವಿರುದ್ಧದ 3ನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು- ಭಾರತಕ್ಕೆ ಏಕದಿನ ಸರಣಿ!

ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯೂ ಭಾರತದ ಕೈವಶವಾಗಿದೆ.  3ನೇ ಏಕದಿನ ಪಂದ್ಯದದಲ್ಲಿ ಅದ್ಬುತ ಪ್ರದರ್ಶನದ ಮೂಲಕ ಟೀಂ ಇಂಡಿಯಾ ,2 ಪಂದ್ಯ ಬಾಕಿ ಇರುವಂತೆಯೇ  ಸರಣಿ ಗೆದ್ದುಕೊಂಡಿದೆ. 3ನೇ ಪಂದ್ಯದ ಹೈಲೈಟ್ಸ್ ಇಲ್ಲಿದೆ.

India vs Nez zealand cricket Virat kohli beat Host by 7 wickets and clinch the ODI series

ಬೇ ಓವಲ್(ಜ.28): ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಗೆಲುವಿನ ಓಟ ಮುಂದುವರಿದಿದೆ.  3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಸೈನ್ಯ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕಿವೀಸ್ ವಿರುದ್ದದ ಏಕದಿನ ಸರಣಿಯನ್ನ ವಶಪಡಿಸಿಕೊಂಡಿದೆ. ಸದ್ಯ ಭಾರತ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಮಹತ್ವದ ಪಂದ್ಯದಲ್ಲಿ ಗೆಲುವಿಗೆ 244 ರನ್ ಗುರಿ ಪಡೆದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಡೀಸೆಂಟ್ ಆರಂಭ ನೀಡಿದರು. ಧವನ್ 28 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ 39 ರನ್ ಜೊತೆಯಾಟ ನೀಡಿತು. ಆದರೆ ರೋಹಿತ್ ಶರ್ಮಾ ಅತ್ಯುತ್ತಮ ಪ್ರದರ್ಶನದ ಮೂಲಕ ಅರ್ಧಶತಕ ಸಿಡಿಸಿದರು. ಏಕದಿನದಲ್ಲಿ ರೋಹಿತ್ 39ನೇ ಅರ್ಧಶತಕ ದಾಖಲಿಸಿದರು.

ಇದನ್ನೂ ಓದಿ: 68ನೇ ವಯಸ್ಸಲ್ಲಿ ನಿವೃತ್ತಿ ಪಡೆದ ಅಂತರಾಷ್ಟ್ರೀಯ ಕ್ರಿಕೆಟಿಗ!

ರೋಹಿತ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟ ಟೀಂ ಇಂಡಿಯಾ ಗೆಲುವು ಖಚಿತಪಡಿಸಿತು. ಇವರ ಶತಕದ ಜೊತೆಯಾಟದಿಂದ ಟೀಂ ಇಂಡಿಯಾ ಸುಲಭ ಗೆಲುವಿನತ್ತ ದಾಪುಗಾಲಿಟ್ಟಿತು. 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರೋಹಿತ್ 62 ರನ್ ಸಿಡಿಸಿ ಔಟಾದರು. ಇಷ್ಟೇ ಅಲ್ಲ ಏಕದಿನದಲ್ಲಿ ಭಾರತದ  ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಧೋನಿ ದಾಖಲೆಯನ್ನ ಸರಿಗಟ್ಟಿದರು. ಧೋನಿ ಭಾರತದ ಪರ ಏಕದಿನದಲ್ಲಿ 215 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಏಷ್ಯಾ 11 ಪರ 7 ಸಿಕ್ಸರ್ ಸಿಡಿಸಿದ್ದಾರೆ. ಇದೀಗ ರೋಹಿತ್ 215 ಸಿಕ್ಸರ್ ಭಾರಿಸಿದ ಸಾಧನೆ ಮಾಡಿದರು.

ಇದನ್ನೂ ಓದಿ:ರಣಜಿ ಟ್ರೋಫಿ: ಕರ್ನಾಟಕದ ಫೈನಲ್ ಕನಸು ಭಗ್ನಗೊಳಿಸಿದ ಪೂಜಾರ

ಕೊಹ್ಲಿ 49ನೇ ಏಕದಿನ ಅರ್ಧಶತಕ ಪೂರೈಸಿದರು. ಕೊಹ್ಲಿ 60 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಅಂಬಾಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಭಾರತ 43 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಾಯುಡು ಅಜೇಯ 40, ಕಾರ್ತಿಕ್ ಅಜೇಯ 38 ರನ್ ಸಿಡಿಸಿದರು. ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದು ಸಂಭ್ರಮ ಆಚರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 49 ಓವರ್‌ಗಳಲ್ಲಿ 243 ರನ್‌ಗಳಿಗೆ ಆಲೌಟ್ ಆಯಿತು. ರಾಸ್ ಟೇಲರ್ 93 ರನ್ ಸಿಡಿಸಿದರೆ, ಟಾಮ್ ಲಾಥಮ್ 51 ರನ್ ಕಾಣಿಕೆ ನೀಡಿದರು. ಮೊಹಮ್ಮದ್ ಶಮಿ 3, ಭುವನೇಶ್ವರ್ 2, ಹಾರ್ದಿಕ್ ಪಾಂಡ್ಯ 2 ಹಾಗೂ ಯಜುವೇಂದ್ರ ಚಹಾಲ್ 2 ವಿಕೆಟ್ ಕಬಳಿಸಿದರು.
 

Latest Videos
Follow Us:
Download App:
  • android
  • ios