ಭಾರತಕ್ಕೆ ಮತ್ತಷ್ಟು ಪದಕ ಗೆದ್ದುಕೊಡುತ್ತೇನೆ: ಮೋದಿಗೆ ಹಿಮಾ ದಾಸ್ ಭರವಸೆ
ದೇಶಕ್ಕಾಗಿ ಇನ್ನಷ್ಟು ಪದಕ ಗೆಲ್ಲುವುದಕ್ಕಾಗಿ ಭಾರತದ ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಪ್ರಧಾನಿ ನರೇಂದ್ರ ಮೋದಿಗೆ ಭರವಸೆ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಜು.22]: ಪ್ರಸಕ್ತ ತಿಂಗಳಲ್ಲಿ ಚಿನ್ನದ ಪದಕಗಳ ಬೇಟೆಯಾಡುತ್ತಿರುವ ಹಿಮಾ ದಾಸ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಹಿಮಾ ದಾಸ್ ದೇಶಕ್ಕಾಗಿ ಶಕ್ತಿ ಮೀರಿ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಪ್ರಧಾನಿಗೆ ಮಾತು ಕೊಟ್ಟಿದ್ದಾರೆ.
3 ವಾರದಲ್ಲಿ 5ನೇ ಚಿನ್ನ ಗೆದ್ದ ಹಿಮಾ ದಾಸ್
ಹಿಮಾ ದಾಸ್ ಸಾಧನೆಗೆ ಟ್ವಿಟರ್ ಮೂಲಕ ಮೋದಿ ಅಭಿನಂದನೆ ಸಲ್ಲಿಸಿದ್ದರು. ಹಿಮಾ ದಾಸ್ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ವಿವಿಧ ಟೂರ್ನಿಗಳಲ್ಲಿ 5 ಪದಕ ಗೆದ್ದ ಹಿಮಾ ದಾಸ್ ಸಾಧನೆ ನಿಜಕ್ಕೂ ಅದ್ಭುತವಾದದ್ದು. ಹಿಮಾ ದಾಸ್ ಸಾಧನೆಗೆ ಅಭಿನಂದನೆಗಳು ಹಾಗೂ ಮುಂದಿನ ಭವಿಷ್ಯವು ಸುಖಕರವಾಗಿರಲಿ ಎಂದು ಹಾರೈಸಿದ್ದರು.
ಮೋದಿ ಹಾರೈಕೆಗೆ ಟ್ವಿಟರ್ ಮೂಲಕವೇ ಪ್ರತಿಕ್ರಿಯಿಸಿರುವ ಹಿಮಾ ದಾಸ್, ನಿಮ್ಮ ಹಾರೈಕೆಗೆ ಧನ್ಯವಾದಗಳು. ನಾನು ಮತ್ತಷ್ಟು ಕಠಿಣ ಪ್ರಯತ್ನದ ಮೂಲಕ ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಹಿಮಾ ದಾಸ್ ಜುಲೈ ತಿಂಗಳ ಚಿನ್ನದ ಬೇಟೆ:
ಜುಲೈ 2 ರಂದು ಪೋಲೆಂಡ್‌ನ ಪೋಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿ ಕೂಟದ 200 ಮೀ. ಸ್ಪರ್ಧೆ ಯಲ್ಲಿ ಚಿನ್ನ
ಜು.7 ರಂದು ಪೋಲೆಂಡ್‌ನ ಕುಟ್ನೋ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ ಚಿನ್ನ
ಜು. 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೋ ಅಥ್ಲೆಟಿಕ್ಸ್ ಕೂಟದ 200 ಮೀ. ಸ್ಪರ್ಧೆಯಲ್ಲಿ ಚಿನ್ನ
ಜು.17 ರಂದು ಜೆಕ್ ಗಣರಾಜ್ಯ ದಲ್ಲಿ ನಡೆದ ಟಬೂರ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ ಚಿನ್ನ
ಜು.20 ರಂದು ಜೆಕ್ ಗಣರಾಜ್ಯದ ವೆಲ್ಕಾ ಸಿನಾ ಮೆಜಿನರೊಡನಿ ಅಥ್ಲೆಟಿಕ್ಸ್ ಕೂಟದ 400 ಮೀ. ಓಟದಲ್ಲಿ ಚಿನ್ನ