ನೇಪಿಯರ್(ಜ.23): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಬುತ ಬೌಲಿಂಗ್ ದಾಳಿಯಿಂದ ಭಾರತದ ಸುಲಭ ಗೆಲುವು ದಾಖಲಿಸಿತು. ಟೆಸ್ಟ್ ಬಳಿಕ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಕರಾರುವಕ್ ದಾಳಿ ಸಂಘಟಿಸಿದ ಶಮಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಕುಲ್ದೀಪ್–ಶಮಿ ಮ್ಯಾಜಿಕ್: ಅಲ್ಪ ಮೊತ್ತಕ್ಕೆ ಕಿವೀಸ್ ಆಲೌಟ್

ಮೊದಲ ಏಕದಿನದಲ್ಲಿ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಮೊಹಮ್ಮದ್ ಶಮಿಗೆ ನಿಗಧಿತ ಓವರ್ ಕ್ರಿಕೆಟ್‌ಗಿಂತ ಟೆಸ್ಟ್ ಪಂದ್ಯವೇ ಹೆಚ್ಚು ಇಷ್ಟ ಎಂದಿದ್ದಾರೆ. 2018ರಲ್ಲಿ ಸತತ ಟೆಸ್ಟ್ ಪಂದ್ಯ ಆಡೋ ಮೂಲಕ ಆತ್ಮವಿಶ್ವಾಸ ಮರಳಿತು ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾ ಅಬ್ಬರಕ್ಕೆ ಕಿವೀಸ್ ಧೂಳೀಪಟ-ಸರಣಿ ಶುಭಾರಂಭ

2015ರ ವಿಶ್ವಕಪ್ ಟೂರ್ನಿ ಬಳಿಕ ಇಂಜುರಿಗೆ ತುತ್ತಾದ ಶಮಿ ಬರೋಬ್ಬರಿ 2 ವರ್ಷಗಳ ಕಾಲ ತಂಡದಿಂದ ಹೊರಗಿದ್ದರು. 2016ರ ಟಿ20 ವಿಶ್ವಕಪ್ ಮೂಲಕ ಮತ್ತೆ ತಂಡ ಸೇರಿಕೊಂಡಿದ್ದರು. ಇದೀಗ 2019ರ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗೋ ಎಲ್ಲಾ ಸಾಧ್ಯತೆಗಳಿವೆ.