ಇದು ಕೆರಿಬಿಯನ್ ನೆಲದಲ್ಲಿ ನನ್ನ ಕೊನೆಯ ಅಂತರಾಷ್ಟ್ರೀಯ ಏಕದಿನ ಸರಣಿ. ಹಾಗಾಗಿ ನನಗೆ ಸಾಧ್ಯವಾದಷ್ಟು ಅಭಿಮಾನಿಗಳಿಗೆ ಮನರಂಜನೆ ನೀಡಿದ್ದೇನೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಎರಡೂ ಬಲಿಷ್ಠ ತಂಡಗಳು. ನನ್ನ ಕೊನೆಯ ಪಂದ್ಯ ಜಮೈಕಾದಲ್ಲಿ ನಡೆದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು ಎಂದು ಗೇಲ್ ಹೇಳಿದ್ದಾರೆ.
ದುಬೈ[ಮಾ.03]: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ 27 ಎಸೆತಗಳಲ್ಲಿ 77 ರನ್ ಸಿಡಿಸುವ ಮೂಲಕ ತವರಿನಲ್ಲಿ ಕೊನೆಯ ಪಂದ್ಯವನ್ನಾಡಿದರು. 39 ವರ್ಷದ ಗೇಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 424 ರನ್ ಸಿಡಿಸುವ ಮೂಲಕ ಸರಣಿಶ್ರೇಷ್ಠ ಗೌರವಕ್ಕೂ ಭಾಜನರಾದರು.
ಫೆಬ್ರವರಿ ತಿಂಗಳಲ್ಲಿ ನಿರ್ಮಾಣವಾದ 4 ಅಪರೂಪದ ಕ್ರಿಕೆಟ್ ವಿಶ್ವದಾಖಲೆಗಳಿವು..!
2019ರ ವಿಶ್ವಕಪ್ ಬಳಿಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ಗೆ ವಿದಾಯ ಹೇಳಿವುದಾಗಿ ಘೋಷಿಸಿರುವ ಗೇಲ್, ಇದು ಕೆರಿಬಿಯನ್ ನೆಲದಲ್ಲಿ ನನ್ನ ಕೊನೆಯ ಅಂತರಾಷ್ಟ್ರೀಯ ಏಕದಿನ ಸರಣಿ. ಹಾಗಾಗಿ ನನಗೆ ಸಾಧ್ಯವಾದಷ್ಟು ಅಭಿಮಾನಿಗಳಿಗೆ ಮನರಂಜನೆ ನೀಡಿದ್ದೇನೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಎರಡೂ ಬಲಿಷ್ಠ ತಂಡಗಳು. ನನ್ನ ಕೊನೆಯ ಪಂದ್ಯ ಜಮೈಕಾದಲ್ಲಿ ನಡೆದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು ಎಂದು ಗೇಲ್ ಹೇಳಿದ್ದಾರೆ.
ಏಕದಿನ ಕ್ರಿಕೆಟ್‌ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಕ್ರಿಸ್ ಗೇಲ್!
ಕೆರಿಬಿಯನ್ ಜೆರ್ಸಿಯಲ್ಲಿ ತೊಟ್ಟು ಅಭಿಮಾನಿಗಳನ್ನು ರಂಜಿಸುವುದು, ವಿಂಡೀಸ್ ತಂಡವನ್ನು ಪ್ರತಿನಿಧಿಸುವುದು ಒಂದು ಅದ್ಭುತ ಅನುಭವ. 39 ವರ್ಷದ ನಾನು ಸರಣಿಯೊಂದರಲ್ಲಿ 39 ಸಿಕ್ಸರ್ ಸಿಡಿಸುವುದು ವೈಯುಕ್ತಿಕವಾಗಿ ನನಗೆ ಖುಷಿ ಕೊಟ್ಟಿದೆ ಎಂದು ಗೇಲ್ ಸಂತಸ ಹಂಚಿಕೊಂಡಿದ್ದಾರೆ.
ಪಾಂಟಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟಿದ ಗೇಲ್..!
ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ 2-2ರ ಸಮಬಲದೊಂದಿಗೆ ಮುಕ್ತಾಯವಾಯಿತು. ಒಂದು ಪಂದ್ಯ ರದ್ದಾಗಿತ್ತು. ಕೊನೆಯ ಪಂದ್ಯದಲ್ಲಿ ಗೇಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ, ಏಕದಿನ ಕ್ರಿಕೆಟ್’ನಲ್ಲಿ ವೆಸ್ಟ್ ಇಂಡೀಸ್ ಪರ ಅತಿವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಇದಷ್ಟೇ ಅಲ್ಲದೆ 2 ಶತಕ 2 ಅರ್ಧಶತಕದೊಂದಿಗೆ 424 ರನ್ ಚಚ್ಚಿದ ಗೇಲ್ ಸರಣಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 3, 2019, 4:36 PM IST