ಪಾಂಟಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟಿದ ಗೇಲ್..!

ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಗೇಲ್ 97 ಎಸೆತಗಳಲ್ಲಿ 11 ಬೌಂಡರಿ ಹಾಗೂ 14 ಸಿಕ್ಸರ್’ಗಳ ನೆರವಿನಿಂದ 162 ರನ್ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಗೇಲ್’ಗೆ ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ 10 ಸಾವಿರ ರನ್ ಬಾರಿಸಿದವರ ಕ್ಲಬ್’ಗೂ ಗೇಲ್ ಸೇರ್ಪಡೆಗೊಂಡರು. ಇದಷ್ಟೇ ಅಲ್ಲದೆ ಕೆಲವು ಅಪರೂಪದ ದಾಖಲೆಗಳನ್ನು ಗೇಲ್ ಬರೆದಿದ್ದಾರೆ.. 

West Indies Cricketer Chris Gayle completes 10000 runs in ODI cricket

ಗ್ರೇನಡ[ಫೆ.28]: 2019ರ ಏಕದಿನ ವಿಶ್ವಕಪ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಭರ್ಜರಿ ಫಾರ್ಮ್’ಗೆ ಮರಳಿದ್ದಾರೆ. ಈಗಾಗಲೇ ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ 2 ಶತಕ ಸಹಿತ 300 ರನ್ ಬಾರಿಸಿದ್ದಾರೆ. 

ಏಕದಿನ ಕ್ರಿಕೆಟ್‌ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಕ್ರಿಸ್ ಗೇಲ್!

ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಗೇಲ್ 97 ಎಸೆತಗಳಲ್ಲಿ 11 ಬೌಂಡರಿ ಹಾಗೂ 14 ಸಿಕ್ಸರ್’ಗಳ ನೆರವಿನಿಂದ 162 ರನ್ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಗೇಲ್’ಗೆ ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ 10 ಸಾವಿರ ರನ್ ಬಾರಿಸಿದವರ ಕ್ಲಬ್’ಗೂ ಗೇಲ್ ಸೇರ್ಪಡೆಗೊಂಡರು. ಇದು ಗೇಲ್ ಬಾರಿಸಿದ 25ನೇ ಏಕದಿನ ಶತಕವಾಗಿದ್ದು, ದಿಗ್ಗಜ ಕ್ರಿಕೆಟಿಗರ ಪಟ್ಟಿಗೆ ಗೇಲ್ ಸೇರ್ಪಡೆಗೊಂಡಿದ್ದಾರೆ. ಇದಷ್ಟೇ ಅಲ್ಲದೆ ಕೆಲವು ಅಪರೂಪದ ದಾಖಲೆಗಳನ್ನು ಗೇಲ್ ಬರೆದಿದ್ದಾರೆ.. 

"

IPL ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರು!

ಇಲ್ಲಿದೆ ಗೇಲ್ ನಿರ್ಮಿಸಿದ ದಾಖಲೆಗಳ ಪಟ್ಟಿ:

* ಏಕದಿನ ಕ್ರಿಕೆಟ್’ನಲ್ಲಿ 10 ಸಾವಿರ ರನ್ ಬಾರಿಸಿದ ವೆಸ್ಟ್ ಇಂಡೀಸ್’ನ ಎರಡನೇ ಹಾಗೂ ಜಗತ್ತಿನ 14ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ. ಈ ಮೊದಲು ವೆಸ್ಟ್ ಇಂಡೀಸ್’ನ ಬ್ರಿಯಾನ್ ಲಾರಾ ಕೆರಿಬಿಯನ್ ಪರ 10 ಸಾವಿರ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.

* ಸ್ಫೋಟಕ ಬ್ಯಾಟ್ಸ್’ಮನ್ ಗೇಲ್ ಸಿಕ್ಸರ್ ಸಿಡಿಸುವ ಮೂಲಕ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದುವರೆಗೂ 10 ಸಾವಿರ +ರನ್ ಸಿಡಿಸಿದ 14 ಆಟಗಾರರ ಪೈಕಿ ರಿಕಿ ಪಾಂಟಿಂಗ್ ಮಾತ್ರ ಸಿಕ್ಸರ್’ನೊಂದಿಗೆ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಇದಷ್ಟೇ ಅಲ್ಲದೇ ಮೂರೂ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಗೇಲ್ 500 ಸಿಕ್ಸರ್ ಸಿಡಿಸಿದ ಮೊದಲ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದರು.

* ಏಕದಿನ ಕ್ರಿಕೆಟ್’ನಲ್ಲಿ 10 ಸಾವಿರ ರನ್ ಪೂರೈಸಿದ ಅತಿ ಹಿರಿಯ ಕ್ರಿಕೆಟಿಗ ಎನ್ನುವ ದಾಖಲೆಯೂ ಗೇಲ್ ಪಾಲಾಗಿದೆ. ಗೇಲ್ 19 ವರ್ಷ 169 ದಿನಗಳ ಬಳಿಕ 10 ಸಾವಿರದ ಕ್ಲಬ್ ಸೇರಿದ್ದಾರೆ. ಈ ಮೊದಲು ಲಾರಾ 16 ವರ್ಷ 37 ದಿನದಲ್ಲಿ 10 ಸಾವಿರದ ಕ್ಲಬ್ ಸೇರಿದ್ದರು.

* ಏಕದಿನ ಕ್ರಿಕೆಟ್’ನಲ್ಲಿ 300+ ಸಿಕ್ಸರ್ ಸಿಡಿಸಿದ ಎರಡನೇ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಗೇಲ್ ನಿರ್ಮಿಸಿದ್ದಾರೆ. ಈ ಮೊದಲು ಪಾಕಿಸ್ತಾನದ ಶಾಹಿದ್ ಅಫ್ರಿದಿ 300+ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. 

Latest Videos
Follow Us:
Download App:
  • android
  • ios