ಅಹ್ಮ​ದಾ​ಬಾ​ದ್‌(ಸೆ.29) : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿ​ವಾರ ಗುಜ​ರಾತ್‌ ಕ್ರಿಕೆಟ್‌ ಸಂಸ್ಥೆ (ಜಿಸಿ​ಎ) ಅಧ್ಯಕ್ಷ ಸ್ಥಾನ​ಕ್ಕೆ ರಾಜೀನಾಮೆ ನೀಡಿದ್ದಾರೆ. ನರೇಂದ್ರ ಮೋದಿ 2014ರಲ್ಲಿ ಪ್ರಧಾ​ನಿ​ಯಾದ ಬಳಿಕ ಅಮಿತ್‌ ಶಾ ಜಿಸಿಎ ಅಧ್ಯ​ಕ್ಷ​ರಾಗಿ ಆಯ್ಕೆ​ಯಾ​ಗಿ​ದ್ದರು. ಸದ್ಯ ಅಮಿತ್‌ ಶಾ ತಮ್ಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. 

ಇದನ್ನೂ ಓದಿ: ಯಾರದೋ ಕೇಸಲ್ಲಿ ಸಿಲುಕಿದ ಭಾರತ ಕ್ರಿಕೆಟ್ ಸಿಬ್ಬಂದಿ..!

ಆದರೆ ಗುಜ​ರಾತ್‌ ಕ್ರಿಕೆಟ್‌ ಸಂಸ್ಥೆಗೆ ನೂತನ ಅಧ್ಯ​ಕ್ಷ ಯಾರಾ​ಗ​ಲಿ​ದ್ದಾರೆ ಎಂಬುದು ತಕ್ಷ​ಣಕ್ಕೆ ತಿಳಿ​ದು​ಬಂದಿಲ್ಲ. ಅಮಿತ್‌ ಶಾ ಪುತ್ರ ಜಯ್‌ ಶಾ ಕಾರ್ಯ​ದ​ರ್ಶಿ ಹುದ್ದೆ​ಯಲ್ಲಿ ಸೇವೆ ಸಲ್ಲಿ​ಸು​ತ್ತಿದ್ದು, ಅಧ್ಯಕ್ಷ ಗಾದಿ​ಗೇ​ರಿ​ದರೆ ಅಚ್ಚ​ರಿ​ಯಿಲ್ಲ. ಉಪಾ​ಧ್ಯಕ್ಷ ಪರಿ​ಮಳ್‌ ನಾಥ್ವಾನಿ ರಾಜೀ​ನಾಮೆ ನೀಡಿದ್ದು, ಪುತ್ರ ಧನ​ರಾಜ್‌ ಸ್ಥಾನ ಅಲಂಕ​ರಿ​ಸುವ ಸಾಧ್ಯ​ತೆ​ಯಿದೆ.

ಇದನ್ನೂ ಓದಿ: ಮೊಹಮ್ಮದ್ ಅಜರುದ್ದೀನ್‌ಗೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಪಟ್ಟ!

ಲೋಧ  ಸಮಿತಿ ಶಿಫಾರಸಿನ ಬಳಿಕ ಕ್ರಿಕೆಟ್ ಸಂಸ್ಥೆಗಳಲ್ಲಿ ಹಲವು ಬದಲಾವಣೆ ತರಲಾಗಿದೆ.  ಕ್ರಿಕೆಟಿಗರೇ ಆಡಳಿತದ ಚುಕ್ಕಾಣಿ ಹಿಡಿಯಬೇಕು ಅನ್ನೂ ನಿಯಮವಿದೆ. 2 ಬಾರಿಗಿಂತ ಹೆಚ್ಚು ಅವಧಿ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಮುಂದುವರಿಯುವಂತಿಲ್ಲ. ಹೀಗಾಗಿ  ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಶಿಫಾರಸನ್ನ ಅಂಗೀಕರಿಸಿದರೆ ಮಾತ್ರ, ಬಿಸಿಸಿಐ ಧನ ಸಹಾಯ ನೀಡಲಿದೆ.