ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಕೊನೆಯ ಓವರ್’ನಲ್ಲಿ ಕೇವಲ 12 ರನ್’ಗಳನ್ನು ರಕ್ಷಿಸಿಕೊಳ್ಳುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾಗುವ ಮೂಲಕ ಡೆತ್ ಓವರ್’ನಲ್ಲಿ ತಾನೆಷ್ಟು ಉಪಯುಕ್ತ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಹೈದರಾಬಾದ್[ಮೇ.08]: ಭುವನೇಶ್ವರ್ ಕುಮಾರ್ ಟೀಂ ಇಂಡಿಯಾದ ಉಪಯುಕ್ತ ಬೌಲರ್. ತಮ್ಮ ಕರಾರುವಕ್ಕಾದ ಲೈನ್ ಹಾಗೂ ಲೆಂಗ್ತ್ ಜತೆಗೆ ಸ್ವಿಂಗ್ ಕಿಂಗ್ ಎಂದೇ ಕರೆಸಿಕೊಳ್ಳುವ ಭುವನೇಶ್ವರ್ ಕುಮಾರ್ ಪ್ರಸಕ್ತ ಐಪಿಎಲ್’ನಲ್ಲೂ ಮಿಂಚುತ್ತಿದ್ದಾರೆ.
ಟೂರ್ನಿ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಭುವಿ, ಟೂರ್ನಿ ಆರಂಭವಾಗುತ್ತಿದ್ದಂತೆ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಕೊನೆಯ ಓವರ್’ನಲ್ಲಿ ಕೇವಲ 12 ರನ್’ಗಳನ್ನು ರಕ್ಷಿಸಿಕೊಳ್ಳುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾಗುವ ಮೂಲಕ ಡೆತ್ ಓವರ್’ನಲ್ಲಿ ತಾನೆಷ್ಟು ಉಪಯುಕ್ತ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕಾಲಿನ್ ಡಿ ಗ್ರಾಂಡ್’ಹೋಮ್ ಹಾಗೂ ಮನ್ದೀಪ್ ಸಿಂಗ್ ಅವರಂತಹ ಬಲಿಷ್ಠ ಬ್ಯಾಟ್ಸ್’ಮನ್’ಗಳಿದ್ದರೂ ಸತತ 6 ಯಾರ್ಕರ್ ಎಸೆತಗಳನ್ನು ಹಾಕುವ ಮೂಲಕ ಸನ್’ರೆಸರ್ಸ್ ತಂಡಕ್ಕೆ ತಂದುಕೊಡುವಲ್ಲಿ ಯಶಸ್ವಿಯಾದರು.
ಭುವಿ ಬೌಲಿಂಗ್ ಕೊಂಡಾಡಿರುವ ಶಿಖರ್ ಧವನ್, ಒತ್ತಡದ ಪರಿಸ್ಥಿತಿಯಲ್ಲೂ ಭುವಿ ಕೂಲ್ ಆಗಿರುತ್ತಾರೆ. 6 ಕರಾರುವಕ್ಕಾದ ಎಸೆತಗಳನ್ನು ಹಾಕುವ ಮೂಲಕ ಕಳೆದ ರಾತ್ರಿ ಅದ್ಭುತ ಗೆಲುವು ತಂದುಕೊಟ್ಟರು ಎಂದು ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
