ಇದಕ್ಕಿಂತ ಮುಖ್ಯವಾಗಿ 400 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಎನ್ನುವ ದಾಖಲೆಯನ್ನು ಹೆರಾತ್ ಬರೆದರು.

ಅಬುದಾಬಿ(ಅ.03): ಶ್ರೀಲಂಕಾದ ಹಿರಿಯ ಅನುಭವಿ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಟೆಸ್ಟ್ ಕ್ರಿಕೆಟ್'ನಲ್ಲಿ ವಿನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕಿಸ್ತಾನ ವಿರುದ್ಧ ಮೊದಲ ಇನ್ನಿಂಗ್ಸ್‌'ನಲ್ಲಿ 5 ಹಾಗೂ 2ನೇ ಇನ್ನಿಂಗ್ಸ್ 6 ವಿಕೆಟ್‌'ಗಳೊಂದಿಗೆ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಕಬಳಿಸಿದ ರಂಗನಾ ಹೆರಾತ್, ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪೂರೈಸಿದರು. ಈ ಸಾಧನೆ ಮಾಡಿದ ವಿಶ್ವದ 14ನೇ ಹಾಗೂ ಶ್ರೀಲಂಕಾದ 2ನೇ ಬೌಲರ್ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಇದಕ್ಕಿಂತ ಮುಖ್ಯವಾಗಿ 400 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಎನ್ನುವ ದಾಖಲೆಯನ್ನು ಹೆರಾತ್ ಬರೆದರು. ಇದರ ಜತೆಗೆ ಪಾಕಿಸ್ತಾನ ವಿರುದ್ಧ 20 ಟೆಸ್ಟ್‌'ಗಳಲ್ಲಿ 100 ವಿಕೆಟ್ ಕಬಳಿಸಿದ ಸಾಧನೆಯನ್ನೂ ಅವರು ಮಾಡಿದರು.