ನವದೆಹಲಿ[ಡಿ.04]: ಭಾರತ ಮಹಿಳಾ ತಂಡದ ಮಾಜಿ ಕೋಚ್‌ ರಮೇಶ್‌ ಪೊವಾರ್‌ರನ್ನು ಮತ್ತೊಮ್ಮೆ ಪ್ರಧಾನ ಕೋಚ್‌ ಆಗಿ ನೇಮಿಸಬೇಕು ಎಂದು ಭಾರತ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಉಪನಾಯಕಿ ಸ್ಮೃತಿ ಮಂಧನಾ, ಬಿಸಿಸಿಐಗೆ ಪತ್ರ ಬರೆದಿದ್ದಾರೆ. 

ಕೋಚ್‌ ಪವಾರ್‌ಗೆ ಬಿಸಿಸಿಐ ಗೇಟ್‌ಪಾಸ್‌! ಹೊಸ ಅರ್ಜಿ ಆಹ್ವಾನ

ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಈ ವಿಷಯನ್ನು ಸ್ಪಷ್ಟಪಡಿಸಿದ್ದು, 2021ರ ವರೆಗೂ ಪೊವಾರ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಕೋರಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಕೆಲ ಆಟಗಾರ್ತಿಯರು ಮಿಥಾಲಿಗೆ ಬೆಂಬಲ ನೀಡಿದ್ದು, ಪೊವಾರ್‌ ಮುಂದುವರಿಯುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕನ್ನಡಿಗನೇ ಕೋಚ್..?

ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್- ಕೋಚ್ ಆಗಿದ್ದ ರಮೇಶ್ ಪೊವಾರ್ ನಡುವಿನ ಕಿತ್ತಾಟದಿಂದ ಪೊವಾರ್ ತಲೆದಂಡವಾಗಿದೆ. ಇದೀಗ ನೂತನ ಕೋಚ್ ಆಯ್ಕೆ ಮಾಡಲು ಅರ್ಹರಿಂದ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಕನ್ನಡಿಗ ವೆಂಕಟೇಶ್ ಪ್ರಸಾದ್ ಕೋಚ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನನ್ನ ಜೀವನದ ಕರಾಳ ದಿನ: ಮಿಥಾಲಿ ಬೇಸರ