ಭಾರತ ಮಹಿಳಾ ಕ್ರಿಕೆಟ್ ತಂಡದ ವಿವಾದ ತಾರಕಕ್ಕೇರಿದೆ. ಕೋಚ್ ರಮೇಶ್ ಪೊವಾರ್‌ರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಿಥಾಲಿ ರಾಜ್, ‘ಇದು ನನ್ನ ಜೀವನದ ಕರಾಳ ದಿನ’ ಎಂದಿದ್ದಾರೆ.
ನವದೆಹಲಿ[ನ.30]: ಭಾರತ ಮಹಿಳಾ ಕ್ರಿಕೆಟ್ ತಂಡದ ವಿವಾದ ತಾರಕಕ್ಕೇರಿದೆ. ಕೋಚ್ ರಮೇಶ್ ಪೊವಾರ್‌ರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಿಥಾಲಿ ರಾಜ್, ‘ಇದು ನನ್ನ ಜೀವನದ ಕರಾಳ ದಿನ’ ಎಂದಿದ್ದಾರೆ.
ಮಿಥಾಲಿ ಸಂಭಾಳಿಸೋದೇ ಕಷ್ಟ: ಪವಾರ್ ತಿರುಗೇಟು
ಟ್ವೀಟರ್‌ನಲ್ಲಿ ತಮ್ಮ ಬೇಸರ ಹಂಚಿಕೊಂಡಿರುವ ಮಿಥಾಲಿ, ‘ನನಗೆ ಅತೀವ ಬೇಸರವಾಗಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ನನ್ನ ದೇಶಪ್ರೇಮವನ್ನು ಅನುಮಾನಿಸಲಾಗುತ್ತಿದೆ. ನನ್ನ ಕೌಶಲ್ಯವನ್ನು ಪ್ರಶ್ನಿಸಲಾಗುತ್ತಿದೆ. ನನ್ನ ವ್ಯಕ್ತಿತ್ವದ ಮೇಲೆ ಕೆಸರೆರೆಚುವ ಪ್ರಯತ್ನ ನಡೆದಿದೆ. 20 ವರ್ಷಗಳ ನನ್ನ ಪರಿಶ್ರಮ ವ್ಯರ್ಥ ಎನಿಸಲು ಶುರುವಾಗಿದೆ. ಇದು ನನ್ನ ಜೀವನದ ಕರಾಳ ದಿನ’ ಎಂದು ಬರೆದಿದ್ದಾರೆ.
ಅಧಿಕಾರ ಬಳಸಿ ತಂಡದಿಂದ ಹೊರದಬ್ಬಲಾಗಿದೆ-ಬಿಸಿಸಿಐಗೆ ಮಿಥಾಲಿ ಪತ್ರ!
ವೆಸ್ಟ್ ಇಂಡೀಸ್ ನಡೆದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್’ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಭಾರತ ಪರ ಗರಿಷ್ಠ ರನ್ ಸಿಡಿಸಿರುವ ಮಿಥಾಲಿ ರಾಜ್ ಅವರನ್ನು ಸೆಮಿಫೈನಲ್ ಪಂದ್ಯದಿಂದ ಕೈಬಿಡಲಾಗಿತ್ತು. ಈ ನಿರ್ಧಾರವೀಗ ವಿವಾದಕ್ಕೆ ಕಾರಣವಾಗಿದೆ.
