ಲಂಡನ್(ಅ.05): ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಕಾಣಿಸಿಕೊಂಡ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಳಿಕ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದರು. ಬೆನ್ನು ನೋವಿನಿಂದ ಬಳಲುತ್ತಿದ್ದ ಪಾಂಡ್ಯ ಇದೀಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ಯಶಸ್ವಿ ಸರ್ಜರಿ ಮಾಡಲಾಗಿದೆ.

ಇದನ್ನೂ ಓದಿ: ಅಪಘಾತಕ್ಕೀಡಾದ ಅಭಿಮಾನಿಗೆ ಹಾರ್ದಿಕ್ ನೆರವು; ಕಣ್ಣೀರಿಟ್ಟ ಕುಟುಂಬ!

ಸರ್ಜರಿ ಬಳಿಕ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ನನಗಾಗಿ ಪ್ರಾರ್ಥಿಸಿದ, ಸಂದೇಶ ಕಳುಹಿಸಿದ ಎಲ್ಲರಿಗೂ ಧನ್ಯಾವದ. ತಂಡಕ್ಕೆ ಮರಳುವ ಕುರಿತು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

 

ಇದನ್ನೂ ಓದಿ: ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ!

ಸದ್ಯ ವಿಶ್ರಾಂತಿಗೆ ಜಾರಿರುವ ಹಾರ್ದಿಕ್ ಪಾಂಡ್ಯ, ನವೆಂಬರ್ 3 ರಿಂದ ಆರಂಭವಾಗುತ್ತಿರುವ ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಗೂ ಅಲಭ್ಯರಾಗಿದ್ದಾರೆ.  ಭಾರತದ ಪರ 11 ಟೆಸ್ಟ್, 54 ಏಕದಿನ ಹಾಗೂ 40 ಟಿ20 ಪಂದ್ಯ ಆಡಿರುವ ಹಾರ್ದಿಕ್ ಪಾಂಡ್ಯ, 2020ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ತಂಡ ಪ್ರಮುಖ ಆಟಗಾರ ಎಂದೇ ಗುರುತಿಸಿಕೊಂಡಿದ್ದಾರೆ.