ಮುಂಬೈ(ಆ.17): ಟೀಂ ಇಂಡಿಯಾದ ಬೆಸ್ಟ್ ಆಲ್ರೌಂಡರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾರ್ದಿಕ್ ಪಾಂಡ್ಯ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಹಾರ್ದಿಕ್ ಸಹೋದರ ಕ್ರುನಾಲ್ ಪಾಂಡ್ಯ, ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಆಡಿ ತವರಿಗೆ ವಾಪಾಸ್ಸಾಗಿದ್ದಾರೆ. ಇದೀಗ ಪಾಂಡ್ಯ ಸಹೋದರರು ಹೊಚ್ಚ ಹೊಸ ಲ್ಯಾಂಬೋರ್ಗಿನಿ ಹುರಕಾನ್ ಕಾರು ಖರೀದಿಸಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಜೊತೆ ಸಂಬಂಧ; ಮೌನ ಮುರಿದ ಉರ್ವಶಿ ರೌಟೆಲಾ!

ಪಾಂಡ್ಯ ಸಹೋದರರಿಗೆ ಕಾರು ಪ್ರೀತಿ ಸ್ವಲ್ಪ ಹೆಚ್ಚಿದೆ. ಇವರಿಬ್ಬರು ದೇಸಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲೇ ಲೋನ್ ಮೂಲಕ ಕಾರು ಖರೀದಿಸಿದ್ದರು. ಇದೀಗ ದುಬಾರಿ ಕಾರುಗಳ ಒಡೆಯನಾಗಿರುವ ಪಾಂಡ್ಯ, ನೂತನ ಲ್ಯಾಂಬೋರ್ಗಿನಿ ಹುರಕಾನ್ EVO ಕಾರು ಖರೀದಿಸಿದ್ದಾರೆ. ಕಾರು ಖರೀದಿಸಿದ ಬಳಿಕ ಮುಂಬೈನ ಕುರ್ಲಾದಲ್ಲಿ ಪಾಂಡ್ಯ ಬ್ರದರ್ಸ್ ಕಾಣಿಸಿಕೊಂಡಿದ್ದಾರೆ.

 

ಇದನ್ನೂ ಓದಿ:  3 ಕೋಟಿ ವಾಚ್ ಕೊಂಡ ಪಾಂಡ್ಯ!

ಪಾಂಡ್ಯ ಬ್ರದರ್ಸ್ ಖರೀದಿಸಿದ ಕೇಸರಿ ಬಣ್ಣದ ಹೊಚ್ಚ ಹೊಸ ಕಾರಿನ ಬೆಲೆ  3.73 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ದುಬಾರಿ ಕಾರು ಮಾತ್ರವಲ್ಲ, ಇದರ ನಿರ್ವಹಣೆಯೂ ದುಬಾರಿಯಾಗಿದೆ. ಒಂದು ಲೀಟರ್ ಪೆಟ್ರೋಲ್‌ಗೆ 7 ಕಿ.ಮೀ ಮೈಲೇಜ್ ನೀಡಲಿದೆ. 5204 CC ಎಂಜಿನ್ ಹೊಂದಿದ್ದು, 600Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!

ಹಾರ್ದಿಕ್ ಪಾಂಡ್ಯ ಬಳಿಕ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಲ್ಯಾಂಡ್ ರೋವರ್ ರೇಂಜ್ ರೋವರ್, ಮರ್ಸಡೀಸ್ AMG g63, ಆಡಿ A6 ಸೇರಿದಂತೆ ಹಲವು ಕಾರುಗಳಿವೆ. ಇದೀಗ ಈ ಸಾಲಿಗೆ ಲ್ಯಾಂಬೋರ್ಗಿನಿ ಹುರಕಾನ್ ಕಾರು ಕೂಡ ಸೇರಿಕೊಂಡಿದೆ.