ಎಂ ಎಸ್ ಧೋನಿ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ನೀಡಿದ ಸ್ಪೆಷಲ್ ಗಿಫ್ಟ್ ಏನು?

Hardik Pandya's Special Gift For Birthday Boy MS Dhoni
Highlights

ಕ್ರಿಕೆಟಿಗ ಎಂ ಎಸ್ ಧೋನಿ ಹುಟ್ಟುಹಬ್ಬ ಅಂದರೆ ಶುಭಾಶಯ ಜೊತೆಗೆ ಉಡುಗೊರೆಗಳು ತುಂಬಿರುತ್ತೆ. ಇದೀಗ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ, ಧೋನಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಪಾಂಡ್ಯ ನೀಡಿದ ಗಿಫ್ಟ್ ಏನು? ಇಲ್ಲಿದೆ ವಿವರ

ಬ್ರಿಸ್ಟಲ್(ಜು.07): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಧೋನಿ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ಟೀ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಧೋನಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. 

ಧೋನಿ ಹುಟ್ಟಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ನೀಡಿರುವ ವಿಶೇಷ ಉಡುಗೊರೆ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಸ್ಪೆಷಲ್ ಗಿಫ್ಟ್ ಬೇರೇನು ಅಲ್ಲ, ಧೋನಿ ಹೇರ್ ಕಟ್.

 

 

ಧೋನಿ 37ನೇ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಸ್ವತಃ ಧೋನಿ ಹೇರ್ ಕಟ್ ಮಾಡಿದ್ದಾರೆ. ಈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಾಂಡ್ಯ, ಧೋನಿ ಬರ್ತ್‌ಡೆ ಸ್ಪೆಷಲ್ ಗಿಫ್ಟ್ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ:ಟೀಂ ಇಂಡಿಯಾ ಜೊತೆ ಎಂ ಎಸ್ ಧೋನಿ ಬರ್ತ್‌ಡೆ ಸಂಭ್ರಮ ಹೇಗಿತ್ತು?

ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಪತ್ನಿ ಸಾಕ್ಷಿ ಧೋನಿ, ಪುತ್ರಿ ಝಿವಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಎಂ ಎಸ್ ಧೋನಿ, ಇಂದು ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
 

loader