ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ 37ನೇ ವರ್ಷದ ಹುಟುಹಬ್ಬವನ್ನ ತಂಡದ ಜೊತೆ ಆಚರಿಸಿಕೊಂಡಿದ್ದಾರೆ. ಧೋನಿ ಬರ್ತ್‌ಡೇ ಸೆಲೆಬ್ರೇಷನ್ ಹೇಗಿತ್ತು? ಇಲ್ಲಿದೆ ವೀಡಿಯೋ.
ಬ್ರಿಸ್ಟಲ್(ಜು.08): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ತಮ್ಮ ಹುಟ್ಟು ಹಬ್ಬವನ್ನ ತಂಡದ ಜೊತೆ ಆಚರಿಸಿಕೊಂಡಿದ್ದಾರೆ. ತಂಡದ ಸಹ ಆಟಗಾರರು, ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝಿವಾ ಧೋನಿ ಸಮ್ಮುಖದಲ್ಲಿ ಕೇಕ್ ಕತ್ತರಿಸೋ ಮೂಲಕ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡರು.
ಧೋನಿ ಕೇಕ್ ಕತ್ತರಿಸುತ್ತಿದ್ದಂತೆ, ಟೀಂ ಇಂಡಿಯಾ ಕ್ರಿಕೆಟಿಗರು ಕೇಕ್ ಧೋನಿ ಮುಖಕ್ಕೆ ಹಚ್ಚಿ ಸಂಭ್ರಮಿಸಿದರು. ಕಳೆದ ಬಾರಿ ಧೋನಿ ತಾವೇ ಕೇಕ್ ಹಚ್ಚಿಕೊಂಡಿದ್ದರು. ಆದರೆ ಈ ಬಾರಿ ಕೇಕ್ ಹಚ್ಚಿದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್‌ಗೆ ಕೇಕ್ ಹಚ್ಚಿ ಸಂಭ್ರಮಿಸಿದರು.
‘ಹುಟ್ಟು ಹಬ್ಬದ ಶುಭಾಶಯಗಳು ಅಪ್ಪ, ನಿಮಗೆ ವಯಸ್ಸಾಗುತ್ತಿದೆ’ ಎಂದು ಝೀವಾ ಹಾಡು ಹೇಳಿದ್ದು ಎಲ್ಲರ ಗಮನ ಸೆಳೆಯಿತು. ಭಾರತ ತಂಡದ ನಾಯಕ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಸಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಧೋನಿಗೆ ಕೊಹ್ಲಿ ನೀಡಿದ ಸಂದೇಶ ಸಾಮಾಜಿಕ ತಾಣಗಳಲ್ಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
