ಇದೇ ವೇಳೆ ಹರ್ಭಜನ್ ಅವರ ಪತ್ನಿ ಗೀತಾ ಬಸ್ರಾ, ‘ಜನ್ಮದಿನದ ಶುಭಾಷಯಗಳು ಪತಿದೇವ. ಲವ್ ಯೂ’ ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಜು.03): ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಇಂದು 37ನೇ ವಸಂತಕ್ಕೆ ಕಾಲಿರಿಸಿದ್ದು, ಅವರಿಗೆ ಶುಭಾಷಯಗಳ ಸುರಿಮಳೆ ಹರಿದು ಬರುತ್ತಿದೆ.

ಈ ವೇಳೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತನ್ನ ಸಹಪಾಠಿ ಭಜ್ಜಿಗೆ ಶುಭ ಕೋರಿದ್ದು ಮಾತ್ರವಲ್ಲದೇ, ಅ ಪಂಜಾಬ್ ಬೌಲರ್'ನ ಕುರಿತ ಕುತೂಹಲಕಾರಿಯಾದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

‘ಕುಟುಂಬಕ್ಕೆ ಹೆಗಲು ಕೊಡಬೇಕೆಂಬ ದೃಷ್ಟಿಯಿಂದ ಟ್ರಕ್ ಡ್ರೈವರ್ ಆಗಲು ನಿರ್ಧರಿಸಿದ್ದ ಹರ್ಭಜನ್, ಉದ್ಯೋಗ ಹುಡುಕಿಕೊಂಡು ಕೆನೆಡಾಗೆ ಹೊರಟಿದ್ದರಂತೆ. ಬಳಿಕ ತಮ್ಮ ಮನಸು ಬದಲಾಯಿಸಿ ಕ್ರಿಕೆಟ್ ಅಂಗಳಕ್ಕೆ ಮರಳಿದರು’ ಎಂದು ವೀರೂ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಹರ್ಭಜನ್ ಅವರ ಪತ್ನಿ ಗೀತಾ ಬಸ್ರಾ, ‘ಜನ್ಮದಿನದ ಶುಭಾಷಯಗಳು ಪತಿದೇವ. ಲವ್ ಯೂ’ ಎಂದು ಟ್ವೀಟ್ ಮಾಡಿದ್ದಾರೆ.

ಉಳಿದಂತೆ ಐಸಿಸಿ, ಮಾಜಿ ನಾಯಕ ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ಶಿಖರ್ ಧವನ್ ವಿನೂತನವಾಗಿ ಶುಭಕೋರಿದ್ದಾರೆ.

ಹೀಗಿತ್ತು ಶುಭಾಶಯಗಳ ಸುರಿಮಳೆ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…