ಹೈದರಾಬಾದ್‌(ಅ.25): ಟೀಂ ಇಂಡಿಯಾ ವಿಕೆಟ್‌ ಕೀಪರ್‌ ವೃದ್ಧಿಮಾನ ಸಾಹಾ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಹರ್ಭಜನ್‌ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. 

ನಿನ್ನೆ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ವೃದ್ಧಿಮಾನ ಸಾಹಾ ತಮ್ಮ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. 

ಈ ವೇಳೆ ಭಜ್ಜಿ ಎಂದಿನಂತೆ ಟ್ವಿಟರ್‌ ಮೂಲಕ 'ವಿಶ್ವದ ಅತ್ಯುತ್ತಮ ವಿಕೆಟ್‌ ಕೀಪರ್‌ ವೃದ್ಧಿಮಾನ ಸಾಹಾಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಭಜ್ಜಿ ಟ್ವಿಟ್​​ ಮಾಡಿದ್ದಾರೆ. 

ವಿಶ್ವದ ಶ್ರೇಷ್ಠ ವಿಕೆಟ್‌ ಕೀಪರ್‌ ಧೋನಿ, ಆದರೆ ಸಾಹಾಗೇಕೆ ನೀವು ಈ ರೀತಿಯ ವಿಷ್‌ಮಾಡಿದ್ದು ಎಂದು ಹಲವಾರು ಧೋನಿ ಅಭಿಮಾನಿಗಳು ಭಜ್ಜಿಗೆ ಟ್ವಿಟರ್‌ ಮೂಲಕ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಜೊತೆಗೆ ಭಜ್ಜಿಗೆ ತಲೆಕೆಟ್ಟಿದೆಯಂತಲೂ ಟ್ವೀಟ್‌ ಮಾಡಿದ್ದಾರೆ.