Asianet Suvarna News Asianet Suvarna News

ಬಡ ಮಕ್ಕಳಿಕೆಗೆ ಉಚಿತ ಕ್ರಿಕೆಟ್ ತರಬೇತಿ - ಜಿ.ಆರ್‌.ವಿ, ಬಿ.ಎಸ್ ಚಂದ್ರಶೇಕರ್ ಮಾರ್ಗದರ್ಶನ!

ಕ್ಲಬ್ ಕ್ರಿಕೆಟ್, ಲೆದರ್ ಬಾಲ್ ಕ್ರಿಕೆಟ್ ಆಡಲು  ಸಾಮರ್ಥ್ಯವಿಲ್ಲದ ಬಡ ಮಕ್ಕಳಿಗೆ  ಉಚಿತ ತರಬೇತಿ ನೀಡೋ ವಿನೂತನ ಯೋಜನೆ ಸಿದ್ದವಾಗಿದೆ. ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು, ಕನ್ನಡಿಗರಾದ ಜಿ.ಆರ್ ವಿಶ್ವನಾಥ್ ಹಾಗೂ ಬಿಎಸ್ ಚಂದ್ರಶೇಖರ್ ಕೆ.ಎಸ್.ಸಿ.ಎ ಸಹಯೋಗದೊಂದಿಗೆ ಈ ವಿನೂತನ ತರಬೇತಿಯನ್ನ ಆರಂಭಿಸಿದ್ದಾರೆ. ಈ ಉಚಿತ ತರಬೇತಿ ಶಿಬಿರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Googly swing search Karnataka underprivileged childrens get free coaching from GRV and BSC
Author
Bengaluru, First Published Jan 16, 2019, 5:26 PM IST

ಬೆಂಗಳೂರು(ಜ.16): ಕರ್ನಾಟಕದಲ್ಲಿ ತಳಮಟ್ಟದಿಂದ ಕ್ರಿಕೆಟ್ ಅಭಿವೃದ್ಧಿಪಡಿಸಲು ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಬಿ.ಎಸ್ ಚಂದ್ರಶೇಖರ್ ಹಾಗೂ ಜಿ.ಆರ್ ವಿಶ್ವನಾಥ್ ಪಣ ತೊಟ್ಟಿದ್ದಾರೆ.ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ವಿನೂತನ ಗೂಗ್ಲಿ ಸ್ವಿಂಗ್ ಸರ್ಚ್ ಮಹತ್ವಾಂಕ್ಷಿ ಯೋಜನೆ ಜಾರಿಗೊಳ್ಳುತ್ತಿದೆ.

ಇದನ್ನೂ ಓದಿ: ಚೇಸಿಂಗ್‌ನಲ್ಲಿ ಧೋನಿ ಈಗಲೂ ನಂ.1- ಕೊಹ್ಲಿಗೆ ಎಷ್ಟನೇ ಸ್ಥಾನ?

ಗೂಗ್ಲಿ ಸ್ವಿಂಗ್ ಸರ್ಚ್ ಯೋಜನೆಯಡಿ ಪ್ರತಿಭಾನ್ವಿತ ಶಾಲ ಮಕ್ಕಳನ್ನ ಹುಡುಕಿ ಅವರಿಗೆ ಅತ್ಯತ್ತಮ ದರ್ಜೆಯ ತರಬೇತಿ ನೀಡಲಾಗುತ್ತೆ. ಆರ್ಥಿಕವಾಗಿ ಸಶಕ್ತರಲ್ಲದ ಶಾಲಾ ಮಕ್ಕಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಮೊದಲ ಬಾರಿಗೆ ಬೆಂಗಳೂರಿನ 4 ಸರ್ಕಾರಿ ಶಾಲಾಗೆ ಅವಕಾಶ ನೀಡಲಾಗಿದೆ. ಬಳಿಕ ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. 

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!

ಗೂಗ್ಲಿ ಸ್ವಿಂಗ್ ಸರ್ಚ್ ಕುರಿತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. "ಕಳೆದ ವಾರ ಬಿಎಸ್ ಚಂದ್ರಶೇಖರ್ ಈ ಕುರಿತು ಫೋನ್ ಮೂಲಕ ಚರ್ಚೆ ನಡೆಸಿ ಯೋಜನೆ ಸಿದ್ದಪಡಿಸಿದರು. ಇದೀಗ ಕಾರ್ಯರೂಪಕ್ಕೆ ಬಂದಿದೆ" ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ತೆಯ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ ಹೇಳಿದರು.

ಇದನ್ನೂ ಓದಿ: ರಾಮನ್‌ರಿಂದ ಬದಲಾವಣೆ ನಿರೀಕ್ಷೆ: ಮಿಥಾಲಿ ರಾಜ್‌

ಶೀಘ್ರದಲ್ಲೇ ಟ್ರಯಲ್ಸ್ ನಡೆಸಲಾಗುವುದು. ಈ ಮೂಲಕ ಆಯ್ಕೆಯಾಗೋ 16 ವರ್ಷದ ಒಳಗಿನ ಬಾಲಕ-ಬಾಲಕಿಯರಿಗೆ ತರಬೇತಿ ಆರಂಭಿಸಲಾಗುವುದು. ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಪ್ರತಿಭಾನ್ವಿತ ಮಕ್ಕಳಿದ್ದಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಹುಡುಕಲ ಗೂಗ್ಲಿ ಸ್ವಿಂಗ್ ಪ್ರಾಜೆಕ್ಟ್ ಆರಂಭಿಸಿದ್ದೇವೆ ಎಂದು ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ. 

ಈ ಸುದ್ದಿಯನ್ನ ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios