ಗುಡ್ ಬೈ 2018: ಕ್ರೀಡಾ ಕ್ಷೇತ್ರಕ್ಕೆ ಅಂಟಿಕೊಡ ಅತೀ ದೊಡ್ಡ 5 ವಿವಾದ!

2018ನೇ ವರ್ಷ ಕ್ರೀಡಾಪಟುಗಳಿಗೆ ಹೆಚ್ಚು ಅವಿಸ್ಮರಣೀಯವಾಗಿತ್ತು. ಆದರೆ ವಿವಾದಗಳಿಂದ ಹೊರತಾಗಿರಲಿಲ್ಲ. 2018ರಲ್ಲಿ ಭಾರಿ ವಿವಾದಕ್ಕೆ ತುತ್ತಾದ ಕ್ರೀಡಾ ಕ್ಷೇತ್ರದ 5 ಘಟನೆಗಳು ಇಲ್ಲಿದೆ. 

Goodbye 2018 biggest controversies hit sports world

ಬೆಂಗಳೂರು(ಡಿ.30): ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ಸಜ್ಜಾಗಿದ್ದಾರೆ. ಇದೇ ವೇಳೆ 2018ರಲ್ಲಿ ಕ್ರೀಡಾ ಕ್ಷೇತ್ರ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.  ದಾಖಲೆಗಳು ಸೃಷ್ಟಿಯಾಗಿವೆ. ಇದರ ಜೊತೆಗೆ ಹಲವು ವಿವಾದಗಳು ಕ್ರೀಡೆಗೆ ಅಂಟಿಕೊಂಡಿತು. ಕೆಲವೊಂದು ಅಭಿಮಾನಿಗಳ ಬೇಸರಕ್ಕೂ  ಕಾಣವಾಗಿದೆ. 2018ರಲ್ಲಿ ವಿವಾದಕ್ಕೆ ತುತ್ತಾದ ಪ್ರಮುಖ ಘಟನೆಗಳ ವಿವರ ಇಲ್ಲಿದೆ.

ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ವಿರುದ್ಧ 137 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಭಾರತ

ಬಾಲ್ ಟ್ಯಾಂಪರಿಂಗ್:
2018ರಲ್ಲಿನ ಅತೀ ದೊಡ್ಡ ವಿವಾದ ಅಂದರೆ ಅದು ಆಸ್ಟ್ರೇಲಿಯಾ ತಂಡದ ಬಾಲ್ ಟ್ಯಾಂಪರಿಂಗ್. ಸೌತ್ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬೆನ್‌ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾದರು.  ಆರೋಪ ಸಾಬೀತಾಗುತ್ತಿದ್ದಂತೆ, ಕ್ರಿಕೆಟ್ ಆಸ್ಟ್ರೇಲಿಯಾ ಈ ಆಟಗಾರರಿಗೆ ನಿಷೇಧದ ಶಿಕ್ಷೆ ವಿಧಿಸಿತು.

ಕೊಹ್ಲಿ ವಿವಾದಾತ್ಮಕ ಹೇಳಿಕೆ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಬಿಟ್ಟು ತೊಲಗಿ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಟೀಂ ಇಂಡಿಯಾ ಕ್ರಿಕೆಟಿಗರಿಗಿಂತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರೇ ಹೆಚ್ಚು ನಮ್ಮ ದೇಶದಲ್ಲಿದ್ದು ಇತರ ದೇಶದ ಕ್ರಿಕೆಟಿಗರನ್ನ ಇಷ್ಟಪಡೋದಾದರೆ, ಭಾರತ ಬಿಟ್ಟು ತೊಲಗಿ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಬಳಿ ಕ್ಷಮೆ ಯಾಚಿಸಿದ ಆಸಿಸ್ ಕಮೆಂಟೇಟರ್!

ತಂಡದಿಂದ ಮಿಥಾಲಿ ಔಟ್
ಐಸಿಸಿ ಟಿ20 ಸೆಮಿಫೈನಲ್ ಪಂದ್ಯದಿಂದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ತಂಡದಿಂದ ಹೊರಗಿಡಲಾಯ್ತು. ಉತ್ತಮ ಫಾರ್ಮ್‌ನಲ್ಲಿದ್ದ ಮಿಥಾಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಪಂದ್ಯ ಸೋತು ಟೂರ್ನಿಯಿಂದ ಹೊರಬಿತ್ತು. ಬಳಿಕ ಕೋಚ್ ರಮೇಶ್ ಪೊವಾರ್ ವಿರುದ್ಧ ಬಹಿರಂಗ ಪತ್ರ ಬರೆದ ಮಿಥಾಲಿ ಪ್ರಕರಣವನ್ನ ಬಿಸಿಸಿಐ ಕಟಕಟಗೆ ಒಯ್ದಿದ್ದರು.

ಸೆರೆನಾ ವಿಲಿಯಮ್ಸ್ - ಅಂಪೈರ್ ವಿವಾದ
ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಅಮೇರಿಕಾದ ಸೆರೆನಾ ವಿಲಿಯಮ್ಸ್ ಹಾಗೂ ಜಪಾನ್‌ನ ನವೋಮಿ ಒಸಾಕ ಮುಖಾಮುಖಿಯಾಗಿದ್ದರು. ರೋಚಕ ಹೋರಾಟದಲ್ಲಿ ಸೆರೆನಾ ಸೋಲು ಎಲ್ಲರಿಗೂ ಅಘಾತ ತಂದಿತ್ತು. ಪಂದ್ಯದ ನಡುವೆ ಕೋಚ್ ಬಳಿಕ ಸಲಹೆ ಕೇಳಿದ ಸೆರೆನಾಗೆ ಅಂಪೈರ್ ವಾರ್ನಿಂಗ್ ನೀಡಿದ್ದರು. ಮೊದಲೇ ಪಂದ್ಯ ಸೋತ ಸೆರೆನಾ ಅಂಪೈರ್ ವಿರುದ್ಧ ಕೂಗಾಡಿದ್ದರು. ಕಳ್ಳ, ಕಾಮುಕ ಎಂದೆಲ್ಲಾ ಅಂಪೈರ್ ವಿರುದ್ಧ ಸೆರೆನಾ ವಿಲಿಯಮ್ಸ್ ಕೂಗಾಡಿದ್ದರು.

ಇದನ್ನೂ ಓದಿ: 170ಕೀ.ಮಿ ವೇಗದಲ್ಲಿ ಅಪಘಾತ-ಪವಾಡ ಸದೃಶ್ಯ ಬದುಕುಳಿದ F3 ಚಾಲಕಿ!

ಕ್ರಿಸ್ಟಿಯಾನೋ ರೋನಾಲ್ಡೋ ಮೇಲೆ ರೇಪ್ ಕೇಸ್!
ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಕೂಡ 2018ರ ವಿವಾದಕ್ಕೆ ಸಿಲುಕಿದ್ದಾರೆ. ಅಮೇರಿಕಾ ಮೂಲದ ಕಾಥರೆನ್ ಮಯೋರ್ಗ ಹೇಳಿಕೆ ಫುಟ್ಬಾಲ್ ಕ್ಷೇತ್ರವನ್ನ ಬೆಚ್ಚಿ ಬೀಳಿಸಿತ್ತು. ರೋನಾಲ್ಡೋ 2009ರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಆರೋಪನ್ನ ಸ್ವತಃ ರೋನಾಲ್ಡೋ ಅಲ್ಲಗೆಳೆದಿದ್ದರು. 

ಇವಿಷ್ಟೇ ಅಲ್ಲ, ಬಿಸಿಸಿಐ ಸಿಇಓ ರಾಹುಲ್ ಜೊಹ್ಲಿ ವಿರುದ್ದ ಮೀಟೂ ಆರೋಪ ಕೇಳಿಬಂದಿತ್ತು. ಇನ್ನೂ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಜಗಳ ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು.  ಹಸಿನ್ ಜಹಾನ್ ಬಹಿರಂಗ ಹೇಳಿಕೆ, ಪೊಲೀಸ್ ದೂರು ಶಮಿ ಬಿಸಿಸಐ ಒಪ್ಪಂದಕ್ಕೂ ಕುತ್ತು ತಂದಿತ್ತು. 

Latest Videos
Follow Us:
Download App:
  • android
  • ios