2024ರ ಒಲಂಪಿಕ್ಸ್ನಲ್ಲಿ ಕಬಡ್ಡಿ ಸೇರಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಹೇಳಿಕೊಂಡಿದೆ.
ಮುಂಬೈ(ಅ.23): ಭಾರತಕ್ಕೆ 2024 ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಪಕ್ಕಾ. ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಕಬಡ್ಡಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ.
2024ರ ಒಲಂಪಿಕ್ಸ್ನಲ್ಲಿ ಕಬಡ್ಡಿ ಸೇರಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಹೇಳಿಕೊಂಡಿದೆ.
2020ರ ಒಲಂಪಿಕ್ನಲ್ಲೆ ಕಬಡ್ಡಿ ಪಾಲ್ಗೊಳ್ಳಬೇಕಾಯಿತು. ಆದರೆ ಇದು ಸಾಧ್ಯವಾಗಲಿಲ್ಲ. ನಾವು ಎಲ್ಲಾ ರೀತಿಯ ಪ್ರಯತ್ನ ಮಾಡಿದರು ಒಲಂಪಿಕ್ ಫೆಡರೇಶನ್ ಕಬಡ್ಡಿಯನ್ನ ಕೈ ಬಿಟ್ಟಿತ್ತು.
ಆದರೆ 2024ರಲ್ಲಿ ಖಂಡಿತ ಕಬಡ್ಡಿ ಒಲಂಪಿಕ್ನಲ್ಲಿ ಪಾಲ್ಗೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ನ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ 2020ರ ಒಲಂಪಿಕ್ಗೆ ಬೇಸ್ಬಾಲ್, ಕರಾಟೆ, ಕ್ಲೈಂಬಿಂಗ್ ಹಾಗೂ ಸರ್ಫಿಂಗ್ ಹೊಸದಾಗಿ ಸೇರಿಕೊಂಡ ಕ್ರೀಡೆಗಳಾಗಿವೆ.
