ಜಾಗತಿಕ ಭಾರತೀಯ ಪ್ರವಾಸಿ ಕಬಡ್ಡಿ ಲೀಗ್ (GI-PKL) ಅನ್ನು ಹರಿಯಾಣ ಕ್ರೀಡಾ ಸಚಿವ ಗೌರವ್ ಗೌತಮ್ ಅವರು ಉದ್ಘಾಟಿಸಿದರು.
ಗುರುಗ್ರಾಮ್: ಜಾಗತಿಕ ಭಾರತೀಯ ಪ್ರವಾಸಿ ಕಬಡ್ಡಿ ಲೀಗ್‌ನ ಉದ್ಘಾಟನಾ ದಿನದ ಪಂದ್ಯಗಳಲ್ಲಿ ಪುರುಷರ ವಿಭಾಗದಲ್ಲಿ ಪಂಜಾಬಿ ಟೈಗರ್ಸ್, ಹರಿಯಾಣವಿ ಶಾರ್ಕ್ಸ್ ಮತ್ತು ಮರಾಠಿ ವಲ್ಚರ್ಸ್ ತಂಡಗಳು ಗೆಲುವಿನೊಂದಿಗೆ ಆರಂಭಿಸಿದವು.
ಉದ್ಘಾಟನಾ ಪಂದ್ಯದಲ್ಲಿ ಟೈಗರ್ಸ್

ಹೈ ಸ್ಕೋರಿಂಗ್ ಥ್ರಿಲ್ಲರ್‌ನಲ್ಲಿ ಪ್ಯಾಂಥರ್ಸ್ ವಿರುದ್ಧ ಶಾರ್ಕ್ಸ್ ಗೆಲುವು
ಎರಡನೇ ಪಂದ್ಯವು ರೋಚಕ ಥ್ರಿಲ್ಲರ್ ಆಗಿದ್ದು, ಹರಿಯಾಣವಿ ಶಾರ್ಕ್ಸ್ ತೆಲುಗು ಪ್ಯಾಂಥರ್ಸ್ ತಂಡವನ್ನು 47-43 ಅಂತರದಿಂದ ಸೋಲಿಸಿತು. ರೈಡ್‌ಗಳು ಮತ್ತು ಟ್ಯಾಕಲ್‌ಗಳಲ್ಲಿ ಎರಡೂ ತಂಡಗಳು ಸಮಬಲದಲ್ಲಿ ಸ್ಪರ್ಧಿಸಿದವು, ಆದರೆ ನಾಲ್ಕು ಹೆಚ್ಚುವರಿ ಪಾಯಿಂಟ್‌ಗಳು ಮತ್ತು ನಿರ್ಣಾಯಕ ಸೂಪರ್ ರೈಡ್‌ನೊಂದಿಗೆ ಶಾರ್ಕ್ಸ್ ಮುನ್ನಡೆ ಸಾಧಿಸಿತು. ಪ್ಯಾಂಥರ್ಸ್ ನಾಲ್ಕು ಸೂಪರ್ ಟ್ಯಾಕಲ್‌ಗಳೊಂದಿಗೆ ಪ್ರತಿ ಹೋರಾಟ ನಡೆಸಿದರೂ, ಶಾರ್ಕ್ಸ್ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ.
ಭೋಜ್‌ಪುರಿ ಲೆಪರ್ಡ್ಸ್ ವಿರುದ್ಧ ವಲ್ಚರ್ಸ್ ಗೆಲುವು
ಕೊನೆಯ ಪಂದ್ಯದಲ್ಲಿ ಮರಾಠಿ ವಲ್ಚರ್ಸ್ ಭೋಜ್‌ಪುರಿ ಲೆಪರ್ಡ್ಸ್ ತಂಡವನ್ನು 42-21 ಅಂತರದಿಂದ ಸೋಲಿಸಿತು. ವಲ್ಚರ್ಸ್ ರಕ್ಷಣೆಯಲ್ಲಿ ಪ್ರಾಬಲ್ಯ ಸಾಧಿಸಿ 22 ಟ್ಯಾಕಲ್ ಪಾಯಿಂಟ್‌ಗಳು ಮತ್ತು ಐದು ಸೂಪರ್ ಟ್ಯಾಕಲ್‌ಗಳನ್ನು ಗಳಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡಿತು. ಭೋಜ್‌ಪುರಿ ಲೆಪರ್ಡ್ಸ್ ಪಂದ್ಯದ ಉದ್ದಕ್ಕೂ ಲಯ ಕಂಡುಕೊಳ್ಳಲು ಪರದಾಡಿದರು.
ಗುರುಗ್ರಾಮದಲ್ಲಿ GI-PKL ಉದ್ಘಾಟನೆ
ಜಾಗತಿಕ ಭಾರತೀಯ ಪ್ರವಾಸಿ ಕಬಡ್ಡಿ ಲೀಗ್ (GI-PKL) ಅನ್ನು ಹರಿಯಾಣ ಕ್ರೀಡಾ ಸಚಿವ ಗೌರವ್ ಗೌತಮ್ ಅವರು ಉದ್ಘಾಟಿಸಿದರು. ಹರಿಯಾಣ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಪ್ರಧಾನ ಕಾರ್ಯದರ್ಶಿ ಡಿ. ಸುರೇಶ್, ಹೋಲಿಸ್ಟಿಕ್ ಇಂಟರ್ನ್ಯಾಷನಲ್ ಪ್ರವಾಸಿ ಕ್ರೀಡಾ ಸಂಸ್ಥೆ (HIPSA) ಅಧ್ಯಕ್ಷ ಮತ್ತು ವಿಶ್ವ ಕಬಡ್ಡಿ ಅಧ್ಯಕ್ಷ ಕಾಂತಿ ಡಿ. ಸುರೇಶ್ ಮತ್ತು ಅಶೋಕ್ ದಾಸ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. 13 ದಿನಗಳ ಈ ಕಬಡ್ಡಿ ಲೀಗ್ ಏಪ್ರಿಲ್ 30 ರಂದು ಮುಕ್ತಾಯಗೊಳ್ಳಲಿದೆ. ಲೀಗ್ ಹಂತ ಏಪ್ರಿಲ್ 27 ರವರೆಗೆ ಮುಂದುವರಿಯಲಿದ್ದು, ಏಪ್ರಿಲ್ 28 ರಂದು ಪುರುಷರ ಸೆಮಿಫೈನಲ್ ಮತ್ತು ಏಪ್ರಿಲ್ 29 ರಂದು ಮಹಿಳೆಯರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಇಂದಿನಿಂದ ಮಹಿಳಾ ಪಂದ್ಯಗಳು
ಏಷ್ಯಾ, ಯುರೋಪ್ ಮತ್ತು ಆಫ್ರಿಕಾದ ಪ್ರತಿನಿಧಿಗಳೊಂದಿಗೆ ಪುರುಷ ಕ್ರೀಡಾಪಟುಗಳಂತೆಯೇ ಮಹಿಳಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಇಂದು ಆರಂಭವಾಗುವ ಮಹಿಳಾ ಪಂದ್ಯಗಳಲ್ಲಿ ಮರಾಠಿ ಫಾಲ್ಕನ್ಸ್ ತೆಲುಗು ಚೀತಾಸ್ ತಂಡವನ್ನು ಎದುರಿಸಲಿದೆ.
ಪಾಲ್ಗೊಳ್ಳುವ ತಂಡಗಳು
ಪುರುಷರ ತಂಡಗಳು: ಮರಾಠಿ ವಲ್ಚರ್ಸ್, ಭೋಜ್‌ಪುರಿ ಲೆಪರ್ಡ್ಸ್, ತೆಲುಗು ಪ್ಯಾಂಥರ್ಸ್, ತಮಿಳು ಲಯನ್ಸ್, ಪಂಜಾಬಿ ಟೈಗರ್ಸ್, ಹರಿಯಾಣವಿ ಶಾರ್ಕ್ಸ್
ಮಹಿಳಾ ತಂಡಗಳು: ಮರಾಠಿ ಫಾಲ್ಕನ್ಸ್, ಭೋಜ್‌ಪುರಿ ಲೆಪರ್ಡ್ಸ್, ತೆಲುಗು ಚೀತಾಸ್, ತಮಿಳು ಲಯನ್ಸ್, ಪಂಜಾಬಿ ಟೈಗರ್ಸ್, ಹರಿಯಾಣವಿ ಈಗಲ್ಸ್
ಇದನ್ನೂ ಓದಿ: ಲಿವರ್‌ಪೂಲ್ ಮತ್ತೆ ಗೆಲ್ಲಲು ಈ 4 ವಿಭಾಗದಲ್ಲಿ ಸುಧಾರಿಸಲೇಬೇಕು!


