ನವದೆಹಲಿ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ಆತ್ಮ ಚರಿತ್ರೆ ‘ಗೇಮ್ ಚೇಂಜರ್’ ಪುಸ್ತಕದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಗ್ಗೆ ಹಗುರವಾಗಿ ಬರೆದಿದ್ದರು.

ಟೀಂ ಇಂಡಿಯಾ ವಿಶ್ವಕಪ್ ಹೀರೋ ಕಾಲೆಳೆದ ಅಫ್ರಿದಿ

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಗಂಭೀರ್, ಅಫ್ರಿದಿ ಅವರಿಗೆ ಮನೋರೋಗವಿದ್ದು, ತಜ್ಞರನ್ನು ಕಾಣಲು ಭಾರತಕ್ಕೆ ಆಹ್ವಾನ ನೀಡಿದ್ದಾರೆ. ವೈದ್ಯಕೀಯ ಪ್ರವಾಸಕ್ಕಾಗಿ ಭಾರತ ಈಗಲೂ ವೀಸಾ ನೀಡುತ್ತಿದೆ. ಹಾಗೇ ಅಫ್ರಿದಿ ಅವರಿಗೂ ವೀಸಾ ನೀಡುತ್ತೇವೆ. ಮನೋರೋಗ ತಜ್ಞರ ಬಳಿ ಕೊಂಡೊಯ್ಯುವುದಾಗಿ ಅಫ್ರಿದಿಯನ್ನು ಉದ್ದೇಶಿಸಿ ಗಂಭೀರ್, ಟ್ವೀಟ್ ಮಾಡಿದ್ದಾರೆ. 

ಅಫ್ರಿದಿ ತಮ್ಮ ಪುಸ್ತಕದಲ್ಲಿ ಕ್ರಿಕೆಟ್ ಎನ್ನುವ ಶ್ರೇಷ್ಠ ಆಟದಲ್ಲಿ ಗಂಭೀರ್ ಅವರದ್ದೊಂದು ಚಿಕ್ಕ ಪಾತ್ರವಷ್ಟೇ, ಗಂಭೀರ್, ವಿಶ್ವ ಶ್ರೇಷ್ಠ ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್-ಜೇಮ್ಸ್ ಬಾಂಡ್ ಮಿಶ್ರಣದಂತೆ ವರ್ತಿಸುತ್ತಾರೆ ಎಂದು ಬರೆದ ಅಫ್ರಿದಿ ಹಗುರವಾಗಿ ಮಾತನಾಡಿದ್ದರು