ಕರಾಚಿ(ಮೇ.04): ಭಾರತದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ, ತಮ್ಮ ಆತ್ಮಕಥನದಲ್ಲಿ ಹಗುರವಾಗಿ ಬರೆದಿದ್ದಾರೆ. 

ಗಂಭೀರ್‌ಗೆ ಅಭದ್ರತೆ ಕಾಡುತ್ತಿತ್ತು- ಟೀಂ ಇಂಡಿಯಾ ಮಾಜಿ ಕೋಚ್ ಬಿಚ್ಚಿಟ್ರು ಸೀಕ್ರೆಟ್!

ಗಂಭೀರ್‌ ಜತೆ ಮೈದಾನದಲ್ಲಿ ಹಲವು ಬಾರಿ ಕಿತ್ತಾಡಿಕೊಂಡಿದ್ದ ಅಫ್ರಿದಿ, ತಮ್ಮ ಪುಸ್ತಕ ‘ಗೇಮ್‌ ಚೇಂಜರ್‌’ನಲ್ಲಿ, ‘ಕೆಲ ವೈರತ್ವಗಳು ವೈಯಕ್ತಿಕ, ಕೆಲ ವೃತ್ತಿಪರ. ಗಂಭೀರ್‌ ಪ್ರಕರಣವನ್ನೇ ತೆಗೆದುಕೊಳ್ಳುವುದಾದರೆ, ಅವರು ಹಾಗೂ ಅವರ ವರ್ತನೆ. ಅವರಿಗೆ ವ್ಯಕ್ತಿತ್ವವೇ ಇಲ್ಲ. ಕ್ರಿಕೆಟ್‌ ಎನ್ನುವ ಶ್ರೇಷ್ಠ ಆಟದಲ್ಲಿ ಅವರೊಂಂದು ಚಿಕ್ಕ ಪಾತ್ರವಷ್ಟೇ. ಯಾವುದೇ ಶ್ರೇಷ್ಠ ದಾಖಲೆಗಳನ್ನು ಬರೆಯದಿದ್ದರೂ, ಅಹಂಕಾರಕ್ಕೇನೂ ಕಡಿಮೆಯಿಲ್ಲ’ ಎಂದು ಬರೆದಿದ್ದಾರೆ.

ಭಾರತದ 2 ವಿಶ್ವಕಪ್‌ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಗಂಭೀರ್‌ರನ್ನು ಮತ್ತಷ್ಟು ನಿಂದಿಸಿರುವ ಅಫ್ರಿದಿ, ‘ಗಂಭೀರ್‌, ಡಾನ್‌ ಬ್ರಾಡ್ಮನ್‌-ಜೇಮ್ಸ್‌ ಬಾಂಡ್‌ ಮಿಶ್ರಣದಂತೆ ಆಡುತ್ತಾರೆ. ಈ ರೀತಿ ಆಡುವವರನ್ನು ಕರಾಚಿಯಲ್ಲಿ ಸರ್ಯಲ್‌(ಸುಟ್ಟು ಹೋದ) ಎಂದು ಕರೆಯುತ್ತೇವೆ. ಧನಾತ್ಮಕ, ಖುಷಿಯಿಂದಿರುವ ವ್ಯಕ್ತಿಗಳನ್ನು ನಾನು ಇಷ್ಟಪಡುತ್ತೇನೆ. ಅವರು ಆಕ್ರಮಣಕಾರಿ ಇಲ್ಲವೆ ಸ್ಪರ್ಧಾತ್ಮಕ ಮನೋಭಾವ ಹೊಂದಿದ್ದಾರೆಯೇ ಎನ್ನುವುದನ್ನು ನೋಡುವುದಿಲ್ಲ. ಆದರೆ ಗಂಭೀರ್‌ ಧನಾತ್ಮಕವಾಗಿರಲಿಲ್ಲ’ ಎಂದು ಬರೆದಿದ್ದಾರೆ.