Asianet Suvarna News Asianet Suvarna News

ಗಂಭೀರ್, ಬಚೇಂದ್ರಿ ಪಾಲ್ ಸೇರಿ 9 ಕ್ರೀಡಾಸಾಧಕರಿಗೆ ಒಲಿದ ಪದ್ಮಶ್ರೀ ಗೌರವ

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲಿಗ ಸುನಿಲ್ ಚೆಟ್ರಿ ಸೇರಿದಂತೆ 9 ಕ್ರೀಡಾ ಸಾಧಕರಿಗೆ ದೇಶದ 4ನೇ ಅತ್ಯುನ್ನತ ನಾಗರಿಕ ಗೌರವ ಪ್ರಕಟಿಸಲಾಗಿದೆ. 

Gautam Gambhir Bachendri Pal Among 9 Sportspersons To Get Padma Shri Awards
Author
New Delhi, First Published Jan 26, 2019, 1:58 PM IST

ನವದೆಹಲಿ(ಜ.26): ವಿಶ್ವದ ಅತಿ ಎತ್ತರದ ಶಿಖರ ವಾಗಿರುವ ಮೌಂಟ್ ಎವರೆಸ್ಟ್ ಏರಿದ ಭಾರತ ಮೊದಲ ಮಹಿಳಾ ಪರ್ವತಾರೋಹಿ ಬಚೇಂದ್ರಿ ಪಾಲ್‌ಗೆ ದೇಶದ 4ನೇ ಅತ್ಯುನ್ನತ ಗೌರವವಾದ ಪದ್ಮಭೂಷಣವನ್ನು ಪ್ರಕಟಿಸಲಾಗಿದೆ. 

ಉಳಿದಂತೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲಿಗ ಸುನಿಲ್ ಚೆಟ್ರಿ ಸೇರಿದಂತೆ 8 ಕ್ರೀಡಾ ಸಾಧಕರಿಗೆ ದೇಶದ 4ನೇ ಅತ್ಯುನ್ನತ ನಾಗರಿಕ ಗೌರವ ಪ್ರಕಟಿಸಲಾಗಿದೆ. ಕ್ರೀಡೆಯಲ್ಲಿ ಅನನ್ಯ ಸೇವೆ ಸಲ್ಲಿಸಿದ 9 ಕ್ರೀಡಾ ಸಾಧಕರಿಗೆ 70ನೇ ಗಣರಾಜ್ಯೋತ್ಸವದಮುನ್ನ ದಿನವಾದ ಶುಕ್ರವಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು
ಪ್ರಕಟಿಸಲಾಗಿದೆ.

64 ವರ್ಷ ವಯಸ್ಸಿನ ಬಚೇಂದ್ರಿ ಪಾಲ್, 1984ರಲ್ಲಿ ಮೌಂಟ್ ಎವರೆಸ್ಟ್ ಎವರೆಸ್ಟ್‌ನ ತುತ್ತ ತುದಿ ತಲುಪಿದ ಭಾರತದ ಮೊದಲ ಮಹಿಳಾ ಸಾಹಸಿ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಗೌತಮ್ ಗಂಭೀರ್ ಇತ್ತೀಚೆಗಷ್ಟೇ ಅಂ.ರಾ. ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಭಾರತ ಫುಟ್ಬಾಲ್ ತಂಡದ ನಾಯಕರಾಗಿರುವ ಸುನಿಲ್ ಚೆಟ್ರಿ, ಅಂ.ರಾ. ಫುಟ್ಬಾಲ್‌ನಲ್ಲಿ 2ನೇ ಅತಿ ಹೆಚ್ಚು ಗೋಲುಗಳಿಸಿದ ಫುಟ್ಬಾಲಿಗ ಎನಿಸಿದ್ದರು. ಭಾರತ ಕಬಡ್ಡಿ ಆಟಗಾರ ಅಜಯ್ ಠಾಕೂರ್, ಚೆಸ್‌ಪಟು ಹರಿಕಾ, ಶರತ್ ಕಮಲ್, ಬೊಂಬಲ್ಯ ದೇವಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2018ರ ಏಷ್ಯನ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಜರಂಗ್ ಚಿನ್ನ ಜಯಿಸಿದ್ದರು. 

ಕನ್ನಡಿಗರಿಗೆ ಸಿಕ್ಕಿಲ್ಲ ಪ್ರಶಸ್ತಿ: ಕ್ರೀಡೆಯಲ್ಲಿ ಸಾಧನೆ ತೋರಿದ 9 ಕ್ರೀಡಾಪಟುಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಯಾವೊಬ್ಬ ಕನ್ನಡಿಗರು ಇಲ್ಲದೇ ಇರುವುದು ನಿರಾಸೆ ಮೂಡಿಸಿದೆ.

Follow Us:
Download App:
  • android
  • ios