ಪ್ರತಿಷ್ಠಿತ ಬಾಲೊನ್ ಡಿ’ಒರ್ ಪುಟ್ಬಾಲ್ ಪ್ರಶಸ್ತಿಗೆ ರಿಯಲ್ ಮ್ಯಾಡ್ರಿಡ್ ತಂಡದ ಸ್ಟಾರ್ ಆಟಗಾರರಾದ ಕ್ರಿಶ್ಚಿಯಾನೊ ರೊನಾಲ್ಡೊ, ಗ್ರೆನೆತ್ ಬಾಲೆ ಹಾಗೂ ಮ್ಯಾಂಚೆಸ್ಟರ್ ಸಿಟಿ ಪುಟ್ಬಾಲ್ ತಂಡದ ಸರ್ಗಿಯೊ ಆ್ಯಗುರೊ ಅವರು ನಾಮನಿರ್ದೇಶನಗೊಂಡಿದ್ದಾರೆಂದು ವರದಿಯಾಗಿದೆ.

ಪ್ಯಾರಿಸ್(ಅ.24): ಜಾಗತಿಕ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿದ ಪುಟ್ಬಾಲ್ ಆಟಗಾರರಿಗೆ ವಾರ್ಷಿಕವಾಗಿ ನೀಡಲಾಗುವ ಪ್ರತಿಷ್ಠಿತ ಬಾಲೊನ್ ಡಿ’ಒರ್ ಪುಟ್ಬಾಲ್ ಪ್ರಶಸ್ತಿಗೆ ರಿಯಲ್ ಮ್ಯಾಡ್ರಿಡ್ ತಂಡದ ಸ್ಟಾರ್ ಆಟಗಾರರಾದ ಕ್ರಿಶ್ಚಿಯಾನೊ ರೊನಾಲ್ಡೊ, ಗ್ರೆನೆತ್ ಬಾಲೆ ಹಾಗೂ ಮ್ಯಾಂಚೆಸ್ಟರ್ ಸಿಟಿ ಪುಟ್ಬಾಲ್ ತಂಡದ ಸರ್ಗಿಯೊ ಆ್ಯಗುರೊ ಅವರು ನಾಮನಿರ್ದೇಶನಗೊಂಡಿದ್ದಾರೆಂದು ವರದಿಯಾಗಿದೆ.

ಈ ಮೂವರು ಸ್ಟಾರ್ ಆಟಗಾರರೊಂದಿಗೆ ಬೊರುಸಿಯಾ ಡಾರ್ಟ್‌ಮೊಂಡ್ ತಂಡದ ಸ್ಟ್ರೈಕರ್ ಪಿಯೆರ್ ಔಬಾಮೆಯಂಗ್, ಇಟಲಿ ರಾಷ್ಟ್ರೀಯ ತಂಡದ ಗೋಲ್ ಕೀಪರ್ ಜಿಯಾನ್‌ಲೂಗಿ ಬ್ಪೊನ್ ಅವರ ಹೆಸರುಗಳೂ ನಾಮನಿರ್ದೇಶನಗೊಂಡಿವೆ ಎಂದು ಹೇಳಲಾಗಿದೆ.

ಕಳೆದ ವರ್ಷ ಬಾರ್ಸಿಲೋನಾ ತಂಡದ ಲಿಯೋನಲ್ ಮೆಸ್ಸಿ ಬಾಲೊನ್ ಡಿ’ಒರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

2014ರಲ್ಲಿ ಕೊನೆಯ ಬಾರಿಗೆ ಬಾಲೂನ್ ಡಿ'ಓರ್ ಪ್ರಶಸ್ತಿ ಗೆದ್ದುಕೊಂಡಿದ್ದ ಪೋರ್ಚುಗಲ್ ತಂಡದ ನಾಯಕ ರೋನಾಲ್ಡೋ ನಾಲ್ಕನೇ ಬಾರಿಗೆ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.